ಬಿಜೆಪಿ ನೀಡಿದ ಗಡುವಿಗೆ ಕಾಯುತ್ತಿದ್ದೇನೆ: ಶಿವಕುಮಾರ್

7

ಬಿಜೆಪಿ ನೀಡಿದ ಗಡುವಿಗೆ ಕಾಯುತ್ತಿದ್ದೇನೆ: ಶಿವಕುಮಾರ್

Published:
Updated:

ಹಾಸನ: ‘ಸಮ್ಮಿಶ್ರ ಸರ್ಕಾರ ಪತನಕ್ಕೆ ಬಿಜೆಪಿ ನೀಡಿದ ಗಡುವು ಏನಾಗಲಿದೆ ಎಂದು ಕಾಯುತ್ತಿದ್ದೇನೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು.

‘ಹಣ, ಹೆಂಡದ ಹೊಳೆ ಹರಿಸಿ ಚುನಾವಣೆ ಗೆದ್ದಿದ್ದೇವೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಹೆಂಡದ ಹೊಳೆಯನ್ನು ಅವರು ಅಡ್ಡಗಟ್ಟಬಹುದಿತ್ತು. ಏಕೆ ಮಾಡಲಿಲ್ಲ. ಮುಂದೆ ಅದನ್ನು ತಡೆಯುವ ಕೆಲಸ ಮಾಡಲಿ’ ಎಂದು ಕುಟುಕಿದರು.

ಉಪಚುನಾವಣೆ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹಿಂದೆಯೇ ಬಿಜೆಪಿಯವರು ಹೇಳಿದ್ದಾರೆ. ಹಾಗಾಗಿ ಇದು ದಿಕ್ಸೂಚಿಯಾಗಲಿದೆ. ಚುನಾವಣೆಯಲ್ಲಿ ನಿಂತ ಕಡೆಯೆಲ್ಲೆಲ್ಲಾ ಗೆಲ್ಲಲು ಆಗುವುದಿಲ್ಲ. ಶಿವಮೊಗ್ಗದಲ್ಲಿ ಸ್ವಲ್ಪ ಸುಧಾರಿಸಿದ್ದೇವೆ. ಮುಂದೆ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !