ನಾನು ದುಡ್ಡಿನ ಗಿಡ ನೆಟ್ಟಿಲ್ಲ: ಕುಮಾರಸ್ವಾಮಿ

7

ನಾನು ದುಡ್ಡಿನ ಗಿಡ ನೆಟ್ಟಿಲ್ಲ: ಕುಮಾರಸ್ವಾಮಿ

Published:
Updated:

ಬೆಂಗಳೂರು: ‘ಸಾಲ ಮನ್ನಾದ ವಿಚಾರದಲ್ಲಿ ನಾನು ಹುಡುಗಾಟ ಆಡುತ್ತಿಲ್ಲ. ಅದಕ್ಕೆ ಎಷ್ಟು ತರಲೆ, ತಾಪತ್ರಯ ಇದೆ ಎಂಬುದು ನನಗಷ್ಟೇ ಗೊತ್ತು. ಒಮ್ಮೆಲೆ ಹಣ ಹಾಕಲು ನಾನೇನು ದುಡ್ಡಿನ ಗಿಡ ನೆಟ್ಟಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು. 

ನಗರದಲ್ಲಿ 24ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಅಲೆಮಾರಿ ಆದಿವಾಸಿಗಳ ಕಲಾಮೇಳದಲ್ಲಿ ಗುರುವಾರ ಮಾತನಾಡಿದ ಅವರು, ‘ರಾತ್ರೋ ರಾತ್ರಿ ರೈತರ ಖಾತೆಗೆ ಹಣ ಹಾಕಲು ಆಗುವುದಿಲ್ಲ. ₹ 49 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದೇನೆ. ಅದನ್ನು ತಕ್ಷಣವೇ ಹಾಕಲಾಗುತ್ತದೆಯೇ? ನನ್ನ ಕಷ್ಟ ನನಗೇ ಗೊತ್ತು. ಹಾಗೆಂದು ರೈತರ ಸಾಲ ಮನ್ನಾ ವಿಚಾರ ಮರೆತಿಲ್ಲ. ಈ ವಿಷಯ ಸಂಬಂಧಿಸಿದಂತೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ವಹಿಸುತ್ತೇನೆ’ ಎಂದರು.

‘ನಾನು ಗೃಹಕಚೇರಿಗೆ, ವಿಧಾನಸೌಧಕ್ಕೆ ಜನ ಬರದಂತೆ ನಿರ್ಬಂಧಿಸಿದ್ದೇನೆ... ಎಂದೆಲ್ಲಾ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಹಾಗೆಲ್ಲಾ ಇದ್ದಿದ್ದರೆ ಇಷ್ಟೊಂದು ಜನ ನನ್ನನ್ನು ಭೇಟಿಯಾಗಲು ಏಕೆ ಬರುತ್ತಿದ್ದಾರೆ? ಹೀಗೆ ಊಹಾಪೋಹ ಹರಡಬಾರದು’ ಎಂದು ಖಾರವಾಗಿ ನುಡಿದರು.

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 1

  Sad
 • 2

  Frustrated
 • 8

  Angry

Comments:

0 comments

Write the first review for this !