ಗುರುವಾರ , ಅಕ್ಟೋಬರ್ 17, 2019
21 °C

ಜಿ. ಪರಮೇಶ್ವರ, ಜಾಲಪ್ಪ ಮನೆಗಳಲ್ಲಿ ಐ.ಟಿ ಶೋಧ

Published:
Updated:

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಡಾ. ಜಿ.ಪರಮೇಶ್ವರ ಮತ್ತು ಮಾಜಿ ಸಚಿವ ಆರ್‌. ಎಲ್‌. ಜಾಲಪ್ಪ ಸೇರಿದಂತೆ ಅನೇಕರ ಮನೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಗುರುವಾರ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ.

ಬೆಳಿಗ್ಗೆಯೇ ಆದಾಯ ಇಲಾಖೆ ಅಧಿಕಾರಿಗಳು ಸುಮಾರು 30 ತಂಡಗಳಲ್ಲಿ ಕಾಂಗ್ರೆಸ್‌ ನಾಯಕರ ‘ಬೇಟೆ’ ಆರಂಭಿಸಿದ್ದಾರೆ. ತುಮಕೂರು, ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ನಗರದಲ್ಲಿ ಏಕಕಾಲಕ್ಕೆ ದಾಳಿ ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಾಲಪ್ಪರ ಶಿಕ್ಷಣ ಸಂಸ್ಥೆಗಳಲ್ಲಿ ಐ.ಟಿ ಶೋಧ

ಕೊರಟಗೆರೆ ವಿಧಾನಸಭೆ ಕ್ಷೇತ್ರದ ಶಾಸಕರೂ ಆದ ಪರಮೇಶ್ವರ ಅವರ ಒಡೆತನದ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಇಲ್ಲಿನ ಸದಾಶಿವನಗರ ಮನೆ, ಜಾಲಪ್ಪನವರಿಗೆ ಸೇರಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಶೋಧಿಸುತ್ತಿದ್ದಾರೆ. ‍‍‍‍ಪರಮೇಶ್ವರ ಹಾಗೂ ಜಾಲಪ್ಪನವರ ಆಪ್ತರ ಮನೆಗಳಲ್ಲೂ ಶೋಧ ನಡೆದಿವೆ.

Post Comments (+)