ಕೊನೆ ಉಸಿರಿರುವರೆಗೆ ಬಳ್ಳಾರಿಯಲ್ಲೇ ಇರುವೆ: ಇದು ಉಗ್ರಪ್ಪ ಕೊಟ್ಟ ಭರವಸೆ

7

ಕೊನೆ ಉಸಿರಿರುವರೆಗೆ ಬಳ್ಳಾರಿಯಲ್ಲೇ ಇರುವೆ: ಇದು ಉಗ್ರಪ್ಪ ಕೊಟ್ಟ ಭರವಸೆ

Published:
Updated:

ಬಳ್ಳಾರಿ: ‘ನನ್ನ ಕೊನೆಯ ಉಸಿರು ಇರುವವರೆಗೆ ಬಳ್ಳಾರಿಯಲ್ಲಿಯೇ ಇರುವೆ. ಬಳ್ಳಾರಿ ನನ್ನ ಮೊದಲ ಮನೆ.‌ ನನ್ನನ್ನು ಹೊರಗಿನವನು ಎಂದು ಟೀಕಿಸಿದ ಬಿಜೆಪಿಗೆ ಜನರೇ ಪಾಠ ಕಲಿಸಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ತಿಳಿಸಿದರು.

ಚುನಾವಣೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ ಖಾತ್ರಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದ ಜನರು ಬಹುದೊಡ್ಡ ಬಹುಮತದಿಂದ ಲೋಕಸಭೆಗೆ ಕಳಿಸುತ್ತಿದ್ದಾರೆ. ನಿಮ್ಮ ಮನೆಯ ಮಗನಾಗಿ, ಸೋದರನಾಗಿ ಮತ್ತು ಸ್ನೇಹಿತನಾಗಿ ಕ್ಷೇತ್ರದ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವೆ’ ಎಂದು ಭರವಸೆ ನೀಡಿದರು.

‘ಬೂತ್‌ ಮಟ್ಟದಿಂದ ರಾಷ್ಟ್ರಮಟ್ಟದವರೆಗಿನ ಪಕ್ಷದ ಎಲ್ಲ ನಾಯಕರು ಸಹಕರಿಸಿ ಆಶೀರ್ವದಿಸಿದ್ದಾರೆ. ನಾನು ಎಂದಿಗೂ ಬದ್ಧತೆಯನ್ನು ಬಿಟ್ಟುಕೊಡುವುದಿಲ್ಲ. ಸರ್ವಾಧಿಕಾರಿ‌ ಹಾಗೂ ಜನವಿರೋಧಿ‌ ತತ್ವವನ್ನು ಜನರು ಸೋಲಿಸುವ ಮೂಲಕ 2019ರ ಲೋಕಸಭೆ ಚುನಾವಣೆಗೆ‌ ದಿಕ್ಸೂಚಿ ಎನ್ನಬಹುದಾದ ಫಲಿತಾಂಶಕ್ಕೆ ಕಾರಣರಾಗಿದ್ದಾರೆ’ ಎಂದು ನುಡಿದರು.

‘ಇಂಧನ, ಅಡುಗೆ ಅನಿಲ‌, ‌ರಸಗೊಬ್ಬರ ಬೆಲೆ ಏರಿಕೆಗೆ ಜನ ತಕ್ಕ ಉತ್ತರ ನೀಡಿದ್ದಾರೆ ಎಂದರು. ಹಗರಣಗಳಿಂದ ಗಮನ ಸೆಳೆದ ಕೇಂದ್ರದ ‌ಮೋದಿ ನೇತೃತ್ವದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ‌ ವಿಫಲವಾಗಿದೆ ಎಂಬ‌ ಸಂದೇಶವನ್ನೂ ಫಲಿತಾಂಶ ನೀಡಿದೆ.  ಅಧಿಕಾರದ ‌ದುರುಪಯೋಗದಿಂದ ಗೆದ್ದ ಗೆಲುವು ಅಲ್ಲ. ಇದು ಜನಾದೇಶ ತಂದುಕೊಟ್ಟ ಗೆಲುವು. ಅದನ್ನು ಅಲ್ಲಗೆಳೆದಿರುವ ಬಿಜೆಪಿ ಶಾಸಕ ಶ್ರೀರಾಮುಲು ಮತದಾರರಿಗೆ ಅವಮಾನ ಮಾಡಿದ್ದಾರೆ’ ಎಂದು ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 33

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !