ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಐಎಎಸ್ ಅಧಿಕಾರಿಗಳ ವರ್ಗಾವಣೆ ಭರಾಟೆ

Last Updated 6 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್‌, ಐಎಫ್ಎಸ್‌, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಕಾರ್ಯದರ್ಶಿಯಾಗಿರುವ ಎಸ್. ಸೆಲ್ವಕುಮಾರ್ ಅವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹುದ್ದೆಯ ಹೆಚ್ಚುವರಿ ಹೊಣೆ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿಯಾಗಿದ್ದ ಸಿ. ಶಿಖಾ ಅವರಿಗೆ ಬೆಸ್ಕಾಂಎಂ.ಡಿ ಹುದ್ದೆ ನೀಡಲಾಗಿದೆ.

ಸೋಮವಾರ ಸಂಜೆ ಹೊರಡಿಸಿದ್ದ ಆದೇಶ ತಡರಾತ್ರಿ ಬದಲು ಮಾಡಿದ್ದು,ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಶ್ರೀರಂಗಯ್ಯ ಅವರನ್ನು ಮುಂದುವರಿಸಲಾಗಿದೆ. ಈ ಹುದ್ದೆಗೆ ವರ್ಗಾಯಿಸಿದ್ದ ಕೆ.ಎ.ದಯಾನಂದ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸದ್ಯ ಶಿವಮೊಗ್ಗ ಡಿ.ಸಿ.ಯಾಗಿರುವ ಲೋಕೇಶ್ ಅವರಿಗೆ ಯಾವುದೇ ಸ್ಥಾನ ತೋರಿಸಿಲ್ಲ. ದಯಾನಂದ ಅವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆ ನಿರ್ವಹಿಸಿದ್ದರು.

ವರ್ಗಾವಣೆಯಾದವರು:

ಐಎಎಸ್‌: ಎಂ.ವಿ. ಸಾವಿತ್ರಿ–ಕಾರ್ಯದರ್ಶಿ, ಪಂಚಾಯತ್ ರಾಜ್‌ ಇಲಾಖೆ. ಆರ್. ವಿಶಾಲ್–ಆಯುಕ್ತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ. ಬಿ.ಎಸ್. ಶೇಖರಪ್ಪ–ನಿರ್ದೇಶಕ, ಪೌರಾಡಳಿತ. ಮನೋಜ್ ಜೈನ್‌–ಎಂ.ಡಿ, ಕರ್ನಾಟಕ ಸಾರ್ವಜನಿಕ ಭೂಮಿ ನಿಗಮ. ಪಿ. ರಾಜೇಂದ್ರ ಚೋಳನ್–ಎಂ.ಡಿ, ವಾಯವ್ಯ ಸಾರಿಗೆ ನಿಗಮ, ಹುಬ್ಬಳ್ಳಿ.

ಟಿ.ಎಚ್.ಎಂ. ಕುಮಾರ್– ಆಯುಕ್ತ, ಆಹಾರ ಇಲಾಖೆ. ಎಂ. ಕನಗವಲ್ಲಿ–ನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ. ಎಂ.ಜಿ. ಹಿರೇಮಠ–ಜಿಲ್ಲಾಧಿಕಾರಿ, ಗದಗ. ಪೊಮ್ಮಲ ಸುನೀಲ್ ಕುಮಾರ್–ಜಿಲ್ಲಾಧಿಕಾರಿ, ಕೊಪ್ಪಳ, ಸುಂದರೇಶ ಬಾಬು ಎಂ–ಎಂ.ಡಿ, ಹೆಸ್ಕಾಂ, ಹುಬ್ಬಳ್ಳಿ. ಚಾರುಲತಾ ಸೋಮಲ್–ಆಯುಕ್ತೆ, ಶಿವಮೊಗ್ಗ ನಗರ ಪಾಲಿಕೆ. ಸುರಲ್ಕರ್ ವಿಕಾಸ್‌ ಕಿಶೋರ್‌–ಎಂ.ಡಿ, ಗೆಸ್ಕಾಂ, ಕಲಬುರ್ಗಿ. ಅರುಂಧತಿ ಚಂದ್ರಶೇಖರ್–ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಸಿ.ಎನ್. ಮೀನಾ ನಾಗರಾಜ್–ಮುಖ್ಯಮಂತ್ರಿ ಉಪ ಕಾರ್ಯದರ್ಶಿ. ಗಂಗೂಬಾಯಿ ರಮೇಶ ಮಾನಕರ–ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ), ಜಿಲ್ಲಾ ಪಂಚಾಯಿತಿ, ಬಾಗಲಕೋಟೆ. ಮಹಂತೇಶ ಬೀಳಗಿ–ಸಿಇಒ, ಜಿಲ್ಲಾ ಪಂಚಾಯಿತಿ, ವಿಜಯಪುರ.

ಐಎಫ್ಎಸ್‌ : ರಾಮಚಂದ್ರ–ಎಂ.ಡಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಹುಬ್ಬಳ್ಳಿ. ಎನ್.ಎಲ್. ಶಾಂತಕುಮಾರ್–ಕಾರ್ಯದರ್ಶಿ, ಅರಣ್ಯ ಇಲಾಖೆ. ಸಂಜಯ್ ಎಸ್‌ ಬಿಜ್ಜೂರ್–ಕಾರ್ಯನಿರ್ವಾಹಕ ನಿರ್ದೇಶಕ, ಬನ್ನೇರುಘಟ್ಟ ಜೈವಿಕ ಉದ್ಯಾನ. ಮನೋಜ್ ಕುಮಾರ್–ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ. ಆರ್. ಗೋಕುಲ್–ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ವೃತ್ತ. ಪಿ.ಬಿ. ಕರುಣಾಕರ್–ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವೃತ್ತ. ಎಸ್. ಧನಂಜಯ–ನಿರ್ದೇಶಕ, ಭದ್ರಾ ವನ್ಯಜೀವಿ ವಲಯ, ಚಿಕ್ಕಮಗಳೂರು.

ಐಪಿಎಸ್: ಎಸ್.ರವಿ–ಐಜಿಪಿ, ತರಬೇತಿ, ಬೆಂಗಳೂರು. ಶಿವಪ್ರಕಾಶ್ ದೇವರಾಜು–ಎಸ್ಪಿ, ಮಂಡ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT