ಭಾನುವಾರ, ಆಗಸ್ಟ್ 25, 2019
28 °C

ಐಎಎಸ್‌, ಐಪಿಎಸ್‌ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಶುಕ್ರವಾರ ಹಲವು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ವರ್ಗಾಯಿಸಿದೆ. ಬೆಂಗಳೂರು ನಗರ ‌ಪೊಲೀಸ್‌ ಕಮಿಷನರ್‌ ಆಗಿ  ಭಾಸ್ಕರ ರಾವ್‌ ಅವರನ್ನು ನಿಯೋಜಿಸಲಾಗಿದೆ.

ಇದುವರೆಗೂ ನಗರ ಪೊಲೀಸ್‌ ಕಮಿಷನರ್‌ ಆಗಿದ್ದ ಅಲೋಕ್‌ ಕುಮಾರ್‌ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿಯನ್ನಾಗಿ ವರ್ಗಾಯಿಸಲಾಗಿದೆ.

ಹೇಮಂತ್‌ ನಿಂಬಾಳ್ಕರ್–ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಕಮಿಷನರ್‌, ಆರ್‌.ಚೇತನ್‌–ಎಸ್‌ಪಿ, ಕರಾವಳಿ ರಕ್ಷಣಾ ಪೊಲೀಸ್‌, ಉಡುಪಿ, ಡಿ.ದೇವರಾಜ–ಎಸ್‌ಪಿ, ಅಪರಾಧ ತನಿಖಾ ವಿಭಾಗ, ಬೆಂಗಳೂರು, ಡಾ.ಎಂ.ಅಶ್ವಿನಿ–ಡಿಸಿಪಿ ಗುಪ್ತಚರ, ಬೆಂಗಳೂರು ನಗರ, ಡಾ.ರಾಜ್‌ವೀರ್‌ ಪ್ರತಾಪ್‌ ಶರ್ಮಾ– ಎಡಿಜಿಪಿ, ಸಂವಹನ, ಸಾಗಣೆ ಮತ್ತು ಆಧುನೀಕರಣ, ಬೆಂಗಳೂರು, ಮಾಲಿನಿ  ಕೃಷ್ಣಮೂರ್ತಿ– ಎಡಿಜಿಪಿ, ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ.

ಐಎಎಸ್‌: ಪಿ.ರವಿಕುಮಾರ್‌– ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಶಿವಯೋಗಿ ಸಿ.ಕಳಸದ–ಮುಖ್ಯಮಂತ್ರಿಗಳ ಕಾರ್ಯದರ್ಶಿ, ಹೆಚ್ಚುವರಿಯಾಗಿ ಕೆಎಸ್ಆರ್‌ಟಿಸಿ ಎಂಡಿ.

Post Comments (+)