ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ರಚನೆಗೂ ಮುನ್ನ ಭಾರಿ ಸಂಖ್ಯೆಯಲ್ಲಿ ವರ್ಗಾವಣೆ

Last Updated 19 ಆಗಸ್ಟ್ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ರಚನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಾಕಷ್ಟು ಪ್ರಮಾಣದಲ್ಲಿ ವರ್ಗಾವಣೆ ಮಾಡಿದ್ದಾರೆ. ಐಎಎಸ್‌, ಐಪಿಎಸ್‌, ಕೆಎಎಸ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳನ್ನು ವರ್ಗಾಯಿಸಲಾಗಿದೆ.

ಡಾ.ಜಿ.ಕಲ್ಪನಾ– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ.ಎನ್‌.ಮಂಜುಳಾ– ಎಂಡಿ, ಕೆಪಿಟಿಸಿಎಲ್‌, ಡಾ.ಶಮ್ಲಾ ಇಕ್ಬಾಲ್‌– ಆಯುಕ್ತರು, ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಇಲಾಖೆ, ಜಿ.ಎನ್.ಶಿವಮೂರ್ತಿ, ಜಿಲ್ಲಾಧಿಕಾರಿ, ಬೆಂಗಳೂರು ನಗರ, ಪಿ.ಎನ್‌.ರವೀಂದ್ರ– ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ, ಆರ್.ಎಸ್‌.ಪೆದ್ದಪ್ಪಯ್ಯ– ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಮಹಾಂತೇಶ ಬೀಳಗಿ– ಜಿಲ್ಲಾಧಿಕಾರಿ, ದಾವಣಗೆರೆ, ಎಂ.ಎಸ್‌.ಅರ್ಚನಾ– ಜಿಲ್ಲಾಧಿಕಾರಿ, ರಾಮನಗರ, ಕೆ.ಲೀಲಾವತಿ– ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ.ಅರುಂಧತಿ ಚಂದ್ರಶೇಖರ್‌– ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿ.ಜಗದೀಶ– ಜಿಲ್ಲಾಧಿಕಾರಿ, ಉಡುಪಿ.

ಐಪಿಎಸ್‌ ಅಧಿಕಾರಿಗಳ ವರ್ಗ

ಹುಬ್ಬಳ್ಳಿ–ಧಾರವಾಡದ ಪೊಲೀಸ್‌ ಕಮಿಷನರ್‌ಹುದ್ದೆಗೆ ಆರ್.ದಿಲೀಪ್ ಅವರನ್ನು ವರ್ಗಾಯಿಸಲಾಗಿದೆ. ಡಿಐಜಿ ಎಂ.ಎನ್‌.ನಾಗರಾಜ್‌– ಹೆಡ್‌ಕ್ವಾರ್ಟರ್ಸ್‌, ಬೆಂಗಳೂರು, ಡಾ.ಎಂ.ಬಿ.ಬೋರಲಿಂಗಯ್ಯ– ಎಸ್‌ಪಿ, ರೈಲ್ವೆ, ಬೆಂಗಳೂರು, ಡಾ.ಸಂಜೀವ್‌ ಎಂ.ಪಾಟೀಲ್‌– ಎಸ್‌ಪಿ, ಗುಪ್ತಚರ (ಆಡಳಿತ), ಬೆಂಗಳೂರು, ವಿಪುಲ್‌ ಕುಮಾರ್‌– ಐಜಿಪಿ, ದಕ್ಷಿಣ ವಲಯ, ಮೈಸೂರು, ಡಾ.ರಾಮ್‌ ನಿವಾಸ್‌ ಸೆಪಟ್‌– ಎಸ್‌ಪಿ, ಹಾಸನ, ವಿನಾಯಕ ವಸಂತರಾವ್‌ ಪಾಟೀಲ್‌– ಎಸ್‌ಪಿ, ಕಲಬುರ್ಗಿ, ಶಿವಪ್ರಕಾಶ್‌ ದೇವರಾಜು– ಎಸ್‌ಪಿ, ಉತ್ತರ ಕನ್ನಡ.

ಕೆಎಎಸ್‌ ವರ್ಗ

ಎಂ.ಎಲ್‌.ವೈಶಾಲಿ–ಸಿಇಒ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ,ಜಿ.ಎಲ್‌.ಪ್ರವೀಣ್‌ ಕುಮಾರ್‌– ನಿರ್ದೇಶಕರು, ಕೆಪಿಟಿಸಿಎಲ್‌, ಜಯಲಕ್ಷ್ಮಿ– ಆಯುಕ್ತರು, ಹೊಸಪೇಟೆನಗರಸಭೆ, ಬಿ.ಆರ್‌.ಹರೀಶ್‌– ಉಪವಿಭಾಗಾಧಿಕಾರಿ, ದೊಡ್ಡಬಳ್ಳಾಪುರ, ಎಂ.ಎಸ್‌.ಎನ್‌.ಬಾಬು– ಉಪಕಾರ್ಯದರ್ಶಿ–1, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರ್‌.ಅನಿಲ್‌ ಕುಮಾರ್‌– ವಿಶೇಷ ಭೂಸ್ವಾಧೀನಾಧಿಕಾರಿ–2, ಕೆಐಎಡಿಬಿ, ಬೆಂಗಳೂರು, ಎನ್‌.ಆರ್‌ ಉಮೇಶ್‌ಚಂದ್ರ– ಉಪಕಾರ್ಯದರ್ಶಿ–2 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡಾ.ಎಂ.ಜಿ.ಶಿವಣ್ಣ– ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ. ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌: ಕೆ.ಜೈಪ್ರಕಾಶ್‌– ಎಂಡಿ, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು, ಎಚ್‌.ಎಲ್‌.ಪ್ರಸನ್ನ–ಜಲಸಂವರ್ಧನೆ ಅಭಿವೃದ್ಧಿ ಸಂಸ್ಥೆ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT