ಸೋಮವಾರ, ನವೆಂಬರ್ 18, 2019
24 °C

ಖತ್ರಿಗೆ ಉನ್ನತ ಶಿಕ್ಷಣ, ಬಿಸ್ವಾಸ್‌ಗೆ ಬೆಳಗಾವಿ ಆರ್‌.ಸಿ ಹೊಣೆ

Published:
Updated:

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ರಾಜಕುಮಾರ್ ಖತ್ರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ (ಆರ್‌.ಸಿ) ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ಬಿಸ್ವಾಸ್‌ ಅವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಮತ್ತು ಪುನರ್ವಸತಿ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.

ವರ್ಗಾವಣೆಯಾದವರು: ಎ.ಬಿ. ಇಬ್ರಾಹಿಂ–ಕಾರ್ಯದರ್ಶಿ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ (ಹೆಚ್ಚುವರಿ ಪ್ರಭಾರ). ಸಿ.ಶಿಖಾ–ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(ಹೆಚ್ಚುವರಿ).

ಸಲ್ಮಾ ಕೆ. ಫಹಿಮ್‌–ವ್ಯವಸ್ಥಾಪಕ ನಿರ್ದೇಶಕಿ, ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ. ಕೆ.ಜಿ. ಶಾಂತಾರಾಂ–ಆಯುಕ್ತ, ಕಾರ್ಮಿಕ ಇಲಾಖೆ. ಅನಿರುದ್ಧ್ ಶ್ರವಣ್–ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ. ಹೆಪ್ಸಿಬಾ ರಾಣಿ ಕೊರ್ಲಪಾಟಿ–ವ್ಯವಸ್ಥಾಪಕ ನಿರ್ದೇಶಕಿ, ಬೆಂಗಳೂರು ಸ್ಮಾರ್ಟ್ ಸಿಟಿ ನಿಗಮ.

‌ಕೆ. ಶ್ರೀನಿವಾಸ್‌–ಆಯುಕ್ತ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕೆ. ಲೀಲಾವತಿ–ನಿರ್ದೇಶಕಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆ. ಅರುಂಧತಿ ಚಂದ್ರಶೇಖರ್–ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಎಂ.ಆರ್. ರವಿಕುಮಾರ್–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ, ಬೆಂಗಳೂರು. ಡಿ.ಎಸ್. ರಮೇಶ್–ಆಯುಕ್ತ, ಕರ್ನಾಟಕ ಗೃಹ ಮಂಡಳಿ.

ಪ್ರತಿಕ್ರಿಯಿಸಿ (+)