ಮಂಗಳವಾರ, ಆಗಸ್ಟ್ 20, 2019
21 °C

ವಿ.ಪಿ.ಇಕ್ಕೇರಿ: ಸಿ.ಎಂ ಹೆಚ್ಚುವರಿ ಕಾರ್ಯದರ್ಶಿ

Published:
Updated:

ಬೆಂಗಳೂರು: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತ ವಿ.ಪಿ.ಇಕ್ಕೇರಿ ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಅವರಿಗೆ ಸಾರಿಗೆ ಇಲಾಖೆ ಆಯುಕ್ತರ ಹೆಚ್ಚುವರಿ ಹೊಣೆಯೂ ಇದೆ.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ. ಮುಖ್ಯಮಂತ್ರಿ ಅವರ ಉಪಕಾರ್ಯದರ್ಶಿಯಾಗಿದ್ದ ಸಿ.ಎನ್‌.ಮೀನಾ ನಾಗರಾಜ್‌ ಅವರನ್ನು ಖಜಾನೆ ಇಲಾಖೆಯ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. 

ಐಪಿಎಸ್‌ ಅಧಿಕಾರಿಗಳ ವರ್ಗ: ಡಾ.ಅಮರ್‌ ಕುಮಾರ್ ಪಾಂಡೆ–ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ, ಬೆಂಗಳೂರು, ಕಮಲ್ ಪಂತ್‌–ಎಡಿಜಿಪಿ, ಗುಪ್ತಚರ ಇಲಾಖೆ, ಬೆಂಗಳೂರು, ಬಿ.ದಯಾನಂದ–ಐಜಿಪಿ, ಕೆಎಸ್‌ಆರ್‌‍ಪಿ, ಬೆಂಗಳೂರು, ಎಂ.ಚಂದ್ರಶೇಖರ್‌–ಐಜಿಪಿ, ಎಸಿಬಿ, ಬೆಂಗಳೂರು, ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌–ಡಿಐಜಿಪಿ ಮತ್ತು ಕಮಿಷನರ್‌, ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌, ಸಂದೀಪ್‌ ಪಾಟೀಲ್‌–ಡಿಐಜಿಪಿ ಮತ್ತು ಜಂಟಿ ಪೊಲೀಸ್ ಕಮಿಷನರ್‌, ಅಪರಾಧ, ಬೆಂಗಳೂರು, ಎಸ್‌.ಎನ್‌.ಸಿದ್ದರಾಮಪ್ಪ–ಕಮಿಷನರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು, ಡಾ.ಚೇತನ್‌ ಸಿಂಗ್‌ ರಾಥೋಡ್‌– ಡಿಸಿಪಿ, ಕೇಂದ್ರ ವಲಯ, ಬೆಂಗಳೂರು, ಡಾ.ಅನೂಪ್‌ ಎ.ಶೆಟ್ಟಿ–ಎಸ್‌ಪಿ, ರಾಮನಗರ, ಕೆ.ಎಂ.ಶಾಂತರಾಜು– ಎಸ್‌ಪಿ, ಶಿವಮೊಗ್ಗ, ಹನುಮಂತರಾಯ–ಎಸ್‌ಪಿ, ದಾವಣಗೆರೆ.

Post Comments (+)