ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಆಹಾರ ಸಮಾವೇಶ ಇಂದಿನಿಂದ

‘ಸಿಎಫ್‌ಟಿಆರ್‌ಐ’ನಲ್ಲಿ ದೇಶ– ವಿದೇಶಗಳ ಆಹಾರ ವಿಜ್ಞಾನಿಗಳಿಂದ ವಿಚಾರ ವಿನಿಮಯ
Last Updated 11 ಡಿಸೆಂಬರ್ 2018, 12:55 IST
ಅಕ್ಷರ ಗಾತ್ರ

ಮೈಸೂರು: ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘವು ಮೈಸೂರಿನ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಹಾಗೂ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್‌) ಸಹಯೋಗದಲ್ಲಿ ಡಿ. 12ರಿಂದ 15ರವರೆಗೆ 8ನೇ ಅಂತರರಾಷ್ಟ್ರೀಯ ಆಹಾರ ಸಮಾವೇಶ 2018 (ಇಫ್ಕಾನ್ 2018) ಹಮ್ಮಿಕೊಂಡಿದೆ.

ಸಮಾವೇಶದ ಉದ್ಘಾಟನಾ ಸಮಾರಂಭವು ಡಿ. 12ರಂದು ಮಧ್ಯಾಹ್ನ 2.30ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಘಟಿಕೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಪವನಕುಮಾರ್‌ ಅಗರವಾಲ್ ಉದ್ಘಾಟಿಸುವರು. ‍ಪುಣೆಯ ಆಹಾರ ಉದ್ಯಮಿ ಆನಂದ್ ಚೋರ್ಡಿಯಾ ಆಹಾರ ವಸ್ತುಪ್ರದರ್ಶನ ಉದ್ಘಾಟಿಸುವರು. ಸಿಎಫ್‌ಟಿಆರ್‌ಐ ನಿರ್ದೇಶಕ ಕೆಎಸ್‌ಎಂಎಸ್ ರಾಘವ ರಾವ್ ಪೋಸ್ಟರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ಬಳಿಕ ಸಮಾವೇಶವು ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಯಲಿದೆ. ಒಟ್ಟು 25 ತಾಂತ್ರಿಕ ವಿಚಾರಗಳನ್ನು ಕುರಿತು ಪ್ರಬಂಧ ಮಂಡಣೆ ಆಗಲಿದೆ. 2,400 ಮಂದಿ ಪ್ರಬಂಧ ಮಂಡಿಸಲಿದ್ದಾರೆ. ಜತೆಗೆ, ನೂರಕ್ಕೂ ಹೆಚ್ಚು ವಿದೇಶಿ ವಿಜ್ಞಾನಿಗಳು ತಮ್ಮ ಆಹಾರ ಸಂಶೋಧನೆ ಕುರಿತು ಬೆಳಕು ಚೆಲ್ಲಲಿರುವುದು ಈ ಸಮಾವೇಶದ ವಿಶೇಷ.

13, 14ರಂದು ಮುಕ್ತ ಪ್ರದರ್ಶನ:ಡಿ. 13, 14ರಂದು ಸಾರ್ವಜನಿಕರಿಗೆ ಆಹಾರ ತಂತ್ರಜ್ಞಾನ ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶ ಇರಲಿದೆ. ಸಂಸ್ಥೆಯ ಉತ್ತರ ದ್ವಾರದ ಮೂಲಕ ಸಾರ್ವಜನಿಕರು ಪ್ರವೇಶ ಪಡೆಯಬಹುದು. ಪ್ರದರ್ಶನದಲ್ಲಿ 85ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಉದ್ಯಮಿಗಳು ತಮ್ಮ ಉತ್ಪನ್ನಗಳ ಬಗ್ಗೆಯೂ ಪರಿಚಯ ನೀಡಲಿದ್ದಾರೆ.

‘ಈ ಸಮಾವೇಶದಲ್ಲಿ ತಜ್ಞರಿಂದ ತಾಂತ್ರಿಕ ಪ್ರಬಂಧಗಳ ಮಂಡಣೆ ಮಾಡುವುದರಿಂದ ಪರಿಣಿತ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ಜತೆಗೆ ವಸ್ತುಪ್ರದರ್ಶನದ ಮೂಲಕ ನಾಗರಿಕರು ಸಂಶೋಧನೆಗಳನ್ನು ಸ್ವತಃ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT