ಬುಧವಾರ, ಏಪ್ರಿಲ್ 14, 2021
31 °C

ಐಎಫ್‌ಎಸ್ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂವರು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರಿನ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವರಾಜ್‌ ಸಿಂಗ್‌ ಅವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ) ಹುದ್ದೆಗೆ ವರ್ಗ ಮಾಡಲಾಗಿದೆ.

ಧಾರವಾಡದ ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಪಿಸಿಸಿಎಫ್‌ ಆಗಿದ್ದ ಎ.ರಾಧಾ ದೇವಿ ಅವರನ್ನು ಜಲಸಂಪನ್ಮೂಲ ಇಲಾಖೆಯ ಭೂಸ್ವಾಧೀನ ಮತ್ತು ಅರಣ್ಯ ಘಟಕದ ಹೆಚ್ಚುವರಿ ಪಿಸಿಸಿಎಫ್‌ ಆಗಿ ನೇಮಿಸಲಾಗಿದೆ. ರಾಧಾ ದೇವಿ ಅವರ ವರ್ಗದಿಂದ ತೆರವಾದ ಹುದ್ದೆಗೆ ಬೆಂಗಳೂರಿನ ಪ್ರಚಾರ ಮತ್ತು ಐಸಿಟಿ ವಿಭಾಗದ ಹೆಚ್ಚುವರಿ ಪಿಸಿಸಿಎಫ್‌ ವಿಜಯಲಾಲ್‌ ಮೀನಾ ಅವರನ್ನು ನಿಯೋಜಿಸಲಾಗಿದೆ. ಡಿ.ಯತೀಶ್‌ ಕುಮಾರ್‌ ಅವರಿಗೆ 2008ರಿಂದಲೇ ಪೂರ್ವಾನ್ವಯವಾಗುವಂತೆ ಕರ್ನಾಟಕ ಐಎಫ್‌ಎಸ್‌ ವೃಂದಕ್ಕೆ ಬಡ್ತಿ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು