ಗುರುವಾರ , ನವೆಂಬರ್ 21, 2019
23 °C

ಐಎಫ್‌ಎಸ್ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ಪಶುಸಂಗೋಪನಾ ಇಲಾಖೆ ಆಯುಕ್ತ ಐಎಫ್‌ಎಸ್ ಅಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಅವರನ್ನು ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಅರಣ್ಯ ಪರಿಸರ (ತಾಂತ್ರಿಕ) ವಿಭಾಗದ ವಿಶೇಷ ನಿರ್ದೇಶಕರಾಗಿ ಎಸ್. ವೆಂಕಟೇಶನ್, ಪಶುಸಂಗೋಪನಾ ಇಲಾಖೆ ಆಯುಕ್ತರಾಗಿ ಎಸ್.ಆರ್.ನಟೇಶ್ ಅವರನ್ನು ವರ್ಗಾಯಿಸಲಾಗಿದೆ.

ಕೆಎಎಸ್: ಕೆ.ಎನ್.ಅನುರಾಧಾ ಅವರನ್ನು ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ಎಸ್.ರಂಗಪ್ಪ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ, ಸಿ.ಎನ್.ಶ್ರೀಧರ ಅವರನ್ನು ‘ಸೆಸ್ಕ್’ ಪ್ರಧಾನ ವ್ಯವಸ್ಥಾಪಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)