ಭಾನುವಾರ, ಡಿಸೆಂಬರ್ 15, 2019
26 °C

ಐಐಎಸ್‌ಸಿ ದುರಂತ; ₹ 10 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‌ ‘ಸಿಲಿಂಡರ್ ಸ್ಫೋಟದಿಂದ ಮೃತಪಟ್ಟ ಪ್ರಾಜೆಕ್ಟ್ ಎಂಜಿನಿಯರ್ ಪಿ.ಮನೋಜ್ ಕುಮಾರ್ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಐಐಎಸ್‌ಸಿ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ದುರಂತದಲ್ಲಿ ಗಾಯಗೊಂಡಿರುವ ಅತುಲ್ಯ ಉದಯ್‌ಕುಮಾರ್, ಕಾರ್ತಿಕ್ ಶೆಣೈ ಹಾಗೂ ನರೇಶ್ ಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ‘ಚಿಕಿತ್ಸೆಯ ವೆಚ್ಚ ವಿಮೆ ಮೊತ್ತಕ್ಕಿಂತ ಹೆಚ್ಚಾದರೆ ಸಂಸ್ಥೆಯೇ ಭರಿಸುತ್ತದೆ’ ಎಂದು ಗಾಯಾಳುಗಳ ಸಂಬಂಧಿಕರಿಗೆ ಭರವಸೆ ನೀಡಿದೆ.

ಚೇತರಿಕೆ: ‘ಗಾಯಾಳುಗಳ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು’ ಎಂದು ವೈದ್ಯರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು