ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಆರೋಪಿಗೆ ಬಿಜೆಪಿ ಸಖ್ಯ: ಕೃಷ್ಣಭೈರೇಗೌಡ ಆರೋಪ, ಮುಖ್ಯಮಂತ್ರಿ ಉತ್ತರ

ಸದನದಲ್ಲಿ ಪ್ರತಿಧ್ವನಿಸಿದ ಐಎಂಎ ಹಗರಣ
Last Updated 22 ಜುಲೈ 2019, 7:47 IST
ಅಕ್ಷರ ಗಾತ್ರ

ಬೆಂಗಳೂರು:ಐಎಂಎ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಶಾಸಕರೊಬ್ಬರು ಬಿಜೆಪಿ ಸೇರಲು ಸಿದ್ಧ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಶಾಸಕರಹೆಸರನ್ನು ಹೇಳದೇ ಸಚಿವಕೃಷ್ಣಬೈರೇಗೌಡ ಪ್ರಸ್ತಾಪಿಸಿದರು. ಇದು ಸದನದಲ್ಲಿ ಚರ್ಚೆಯ ಕಾವೇರುವಂತೆ ಮಾಡಿತು.

‘ಆರೋಪಿಗಳ ಜತೆ ಬಿರಿಯಾನಿ ತಿಂದು ಅವರನ್ನು ರಕ್ಷಸಿದವರ ಹೆಸರನ್ನೂ ಹೇಳಿ’ ಎಂದು ಶಾಸಕ ಸಿ.ಟಿ.ರವಿ ಕಟಕಿಯಾಡಿದರು.

ರವಿ ಆಕ್ಷೇಪಕ್ಕೆ ಸ್ವಯಂಪ್ರೇರಿತರಾಗಿ ಉತ್ತರ ನೀಡಲು ಎದ್ದು ನಿಂತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ನೀವು ನನ್ನನ್ನೇ ಉದ್ದೇಶಿಸಿ ಹೇಳುತ್ತಿದ್ದೀರಿ. ನನಗದು ಗೊತ್ತಿದೆ. ಅದಕ್ಕೆ ಉತ್ತರ ನೀಡಲು ಮುಂದಾಗಿದ್ದೇನೆ’ ಎಂದರು.

‘ನನಗೆ ಐಎಂಎ ವ್ಯವಸ್ಥಾಪಕರ ಪರಿಚಯವೇ ಇಲ್ಲ. ನೀವು ಹೇಳುತ್ತಿರುವ ಬಿರಿಯಾನಿ ಕಥೆಯೂ ಸುಳ್ಳು. ಮೈತ್ರಿ ಸರ್ಕಾರದ ಆರಂಭದ ದಿನಗಳಲ್ಲಿ ಈಗ ಯಾವ ಶಾಸಕರ ಬಗ್ಗೆ ಕೃಷ್ಣಬೈರೇಗೌಡರು ಮಾತನಾಡಿದರೋ, ಅದೇ ವ್ಯಕ್ತಿಇಫ್ತಿಯಾರ್‌ಗೆ ಬರಬೇಕು’ ಎಂದು ನನ್ನನ್ನು ಐಎಂಎ ಕಚೇರಿಗೆಕರೆದೊಯ್ದಿದ್ದರು’ ಎಂದು ಎಚ್‌ಡಿಕೆ ನುಡಿದರು.

‘ನಾನು ಆ ಕಚೇರಿಗೆ ಹೋಗಿದ್ದು, ಆ ವ್ಯಕ್ತಿಯನ್ನು ಭೇಟಿಯಾಗಿದ್ದೂ ಅದೇ ಮೊದಲು. ನಾನು ಅಲ್ಲಿ ಖರ್ಜೂರವನ್ನು ಬಾಯಿಗೆ ಹಾಕಿಕೊಂಡೆ. ಅದೇ ಚಿತ್ರ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡಿತು. ಐಎಂಎ ವ್ಯವಸ್ಥಾಪಕರನ್ನು ರಕ್ಷಿಸುವ ಪ್ರಯತ್ನವನ್ನು ನಾನು ಎಲ್ಲಿಯೂ ಮಾಡಿಲ್ಲ. ರಾಜ್ಯದ ಪೊಲೀಸರ ತನಿಖೆ ಸರಿಯಿಲ್ಲ ಎಂದು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ವರದಿ ಬಂದ ನಂತರ ನಾನೇ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಚರ್ಚಿಸಿ, ಸರಿಯಾಗಿ ತನಿಖೆ ಮಾಡಿ ಎಂದು ನಿರ್ದೇಶನ ನೀಡಿದ್ದೆ’ ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು.

‘ಐಎಂಎ ನಾನುಮುಖ್ಯಮಂತ್ರಿಯಾದ ಮೇಲೆ ಬಂದ ಕಂಪನಿಯಲ್ಲ. ಸುಮಾರು 11ವರ್ಷಗಳಿಂದ ಇದೆ. ಆ ಕಂಪನಿಯ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವೂ ಇದೆ. ₹250 ಕೋಟಿ ಆದಾಯ ತೆರಿಗೆ ಕಟ್ಟಿದ್ದಕ್ಕೆ ನಮಗೆ ಪ್ರಶಸ್ತಿಯನ್ನೂ ನೀಡಲಾಗಿದೆ ಎಂದು ಅವರು ತೋರಿಸಿದರು’ ಎಂದು ಎಚ್‌ಡಿಕೆ ಹೇಳಿದರು.

‘ಐಎಂಎ ಹಗರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ್ದೇನೆ.ನಮ್ಮ ಅಧಿಕಾರಿಗಳು ಅವನನ್ನುಬಂಧಿಸಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ದುರುಪಯೋಗದ ಸಂಗತಿ, ಯಾರು ಆರೋಪಿಗಳು ಎಂಬುದು ಶೀಘ್ರ ಬೆಳಕಿಗೆ ಬರಲಿದೆ. ಬಡವರ ದುಡ್ಡು ನುಂಗಿ ಹಾಕೋರಿಗೆ ಮೈತ್ರಿ ಸರ್ಕಾರ ರಕ್ಷಣೆ ಕೊಡುವುದಿಲ್ಲ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

‘ಸಾಮೂಹಿಕ ಮರೆವನ್ನು ಬಿಟ್ಟು ಕಣ್ಣುಬಿಟ್ಟು ನೋಡಬೇಕು. ಐಎಂಎ ಒ್ರಕರಣದ ಆರೋಪಿಗೆ ಬಿಜೆಪಿ ಜತೆಗೆ ಸಖ್ಯ ಇರುವುದು ಪತ್ರಿಕೆಗಳ ವರದಿಯಲ್ಲಿ ಬಹಿರಂಗವಾಗಿದೆ’ ಎಂದುಕೃಷ್ಣ ಬೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT