ನರರೋಗ ಶಸ್ತ್ರಚಿಕಿತ್ಸೆ ಕೇಂದ್ರ ಉದ್ಘಾಟನೆ

7

ನರರೋಗ ಶಸ್ತ್ರಚಿಕಿತ್ಸೆ ಕೇಂದ್ರ ಉದ್ಘಾಟನೆ

Published:
Updated:
ಡಾ.ಎನ್.ಕೆ.ವೆಂಕಟರಮಣ ಮಾತನಾಡಿದರು

ಹೊಸಕೋಟೆ: ಎಂವಿಜೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯು ಬ್ರೈನ್ಸ್ ನ್ಯೂರೊ ಸ್ಪೈನ್ ಸಂಸ್ಥೆ ಸಹಕಾರದೊಂದಿಗೆ ನರರೋಗ ಶಸ್ತ್ರಚಿಕಿತ್ಸೆ ಕೇಂದ್ರವನ್ನು ಆರಂಭಿಸಿದೆ.

‘ಅಪಘಾತದಲ್ಲಿ ತಲೆಗೆ ಪೆಟ್ಟಾಗಿರುವವರ ಪ್ರಾಣ ಉಳಿಸುವಲ್ಲಿ ಮೊದಲ ಒಂದು ಗಂಟೆಯ ಚಿಕಿತ್ಸೆ ಅಮೂಲ್ಯವಾಗಿದೆ. ಇಲ್ಲದಿದ್ದಲ್ಲಿ ಅವರ ಪ್ರಾಣಕ್ಕೆ ತೊಡಕಾಗಲಿದೆ ಇಲ್ಲವೇ ನರ ದೌರ್ಬಲ್ಯಕ್ಕೆ ಒಳಗಾಗಲಿದ್ದಾರೆ’ ಎಂದು ಸಂಸ್ಥೆ ಅಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ಹೇಳಿದರು.

ಕೇಂದ್ರವನ್ನು ಉದ್ಘಾಟಿಸಿ  ಮಾತನಾಡಿದ ಅವರು, ‘ಮಿದುಳಿನ ಶಸ್ತ್ರಚಿಕಿತ್ಸೆ, ಬೆನ್ನಿನಹುರಿ ಮತ್ತು ಪಾರ್ಶ್ವವಾಯುಗೆ ಸಂಬಂಧಿಸಿದ ಕಾಯಿಲೆಗೂ ಕೇಂದ್ರ ನೆರವಾಗಲಿದೆ. ಈ ನಿಟ್ಟಿನಲ್ಲಿ ಎಂವಿಜೆ ಆಸ್ಪತ್ರೆ ಅಭಿನಂದನಾರ್ಹ’ ಎಂದರು.

ಕಾಲೇಜಿನ ಅಧ್ಯಕ್ಷ ಡಾ.ಎಂ.ಜೆ.ಮೋಹನ್, ‘ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ನರರೋಗ ಶಸ್ತ್ರಚಿಕಿತ್ಸೆ ಕೇಂದ್ರವನ್ನಾಗಿ ಮಾಡಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !