ಮಂಗಳವಾರ, ಜನವರಿ 28, 2020
19 °C

 ಸ್ತ್ರೀ ಸೇನಾನಿಗಳಿಗೆ 'ರಕ್ಷಾ' ಕವಚ

ಎಸ್‌ ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ರಣಾಂಗಣದಲ್ಲಿ ಸೆಣಸಾಡುವ ಸ್ತ್ರೀ ಸೇನಾನಿಗಳಿಗೆಂದೇ ವಿಶೇಷ ರಕ್ಷಾ ಕವಚ ಅಭಿವೃದ್ಧಿಪಡಿಸಲಾಗಿದೆ.  ಸಿಆರ್‌ಪಿಎಫ್‌, ಆರ್‌ಎಎಫ್‌ ಪಡೆಗಳ ಮಹಿಳಾ ಸಿಬ್ಬಂದಿಯೂ ಇನ್ನು ಮುಂದೆ ಧೈರ್ಯದಿಂದ ಮುನ್ನುಗಿ ಎದುರಾಳಿಗಳನ್ನು ಸದಬಡಿಯಬಹುದು. ಬೀದಿ ದೊಂಬಿ, ಗಲಭೆಯ ವೇಳೆಯಲ್ಲಿ ದುಷ್ಕರ್ಮಿಗಳ ಹಲ್ಲೆಯಿಂದ ರಕ್ಷಣೆ ಪಡೆಯಲು ಈ ರಕ್ಷಾ ಕವಚ ಉಪಯುಕ್ತ.

ಇದನ್ನು ಡಿಆರ್‌ಡಿಓ ಅಂಗ ಸಂಸ್ಥೆಯಾದ ‘ಡಿಫೆನ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಫಿಸಿಯಾಲಜಿ ಅಂಡ್‌ ಅಲೈಡ್‌ ಸೈನ್ಸಸ್‌’ (ಡಿಐಪಿಎಎಸ್‌) ಅಭಿವೃದ್ಧಿಪಡಿಸಿದೆ. ವಿಶ್ವದಲ್ಲೇ ಪ್ರಥಮ ಎನ್ನಲಾಗಿದ್ದು; ಸ್ತ್ರೀ ದೇಹದ ಆವಯವಗಳ ದತ್ತಾಂಶಗಳನ್ನು ಆಧರಿಸಿ(anthropometric) ಕರಾರುವಕ್ಕಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ‘ಫುಲ್‌ ಬಾಡಿ ಪ್ರೊಟೆಕ್ಟರ್‌’ ಎನ್ನಲಾಗುತ್ತದೆ. ಹಿಂಸಾತ್ಮಕ ಗಲಭೆ ಅಥವಾ ದೊಂಬಿಯನ್ನು ನಿಯಂತ್ರಿಸಲು ಪರಿಣಾಮಕಾರಿ ರಕ್ಷಾ ಕವಚವಾಗಿದೆ.

ರಕ್ಷಾ ಕವಚದ ಲಕ್ಷಣಗಳು:

* ವಿಶೇಷ ಪಡೆಗಳ ಮಹಿಳಾ ಯೋಧರ ಅಂಗರಚನೆಗೆ ತಕ್ಕಂತೆ ತಯಾರಿಸಲಾಗುತ್ತದೆ.

* ಕತ್ತು, ಎದೆ, ಪಕ್ಕೆಲುಬು, ತೋಳುಗಳು, ಮೊಣ ಕೈ, ತೊಡೆಗಳು, ಮೊಣ ಕಾಲು, ಬೆನ್ನೆಲುಬಿಗೆ ರಕ್ಷಣೆ

* ಮೂರು ಗಾತ್ರಗಳು: ಮೀಡಿಯಂ, ಲಾರ್ಜ್‌, ಎಕ್ಸ್‌ಎಲ್‌

* ಪೂರ್ಣ ದೇಹ ರಕ್ಷಣಾ ಕವಚ ತಂತ್ರಜ್ಞಾನವನ್ನು ಮೂರು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ.  ಮೂರು ರಾಜ್ಯಗಳು ರಕ್ಷಾ ಕವಚಗಳಿಗೆ  ಬೇಡಿಕೆ ಸಲ್ಲಿಸಿವೆ.

ರಕ್ಷಣೆಯ ವಿಧಗಳು:

ಇರಿತ: ಚಾಕು, ಚೂರಿ ಇರಿತದಿಂದ ಪಾರಾಗಬಹುದು

ಚುಚ್ಚುವಿಕೆ: ಚೂಪಾದ ಸಾಧನಗಳಿಂದ ಚುಚ್ಚಿದರೆ ಏನೂ ಆಗಲ್ಲ

ಆ್ಯಸಿಡ್‌ ದಾಳಿ: ದೇಹದ ಮೇಲೆ ಆ್ಯಸಿಡ್‌ ಎರಚಿದರೂ ಸುಡುವುದಿಲ್ಲ

ಬೆಂಕಿಯಿಂದ ರಕ್ಷಣೆ: ಪೆಟ್ರೋಲ್‌ ಬಾಂಬ್‌ ಅಥವಾ ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ಇದು ರಕ್ಷಣೆ ನೀಡುತ್ತದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು