ಇಂದಿರಾ ಕ್ಯಾಂಟಿನ್ ಅವ್ಯವಹಾರ; ರಾಮದಾಸ್ ಆರೋಪ ಸತ್ಯಕ್ಕೆ ದೂರ: ಯು.ಟಿ ಖಾದರ್

7

ಇಂದಿರಾ ಕ್ಯಾಂಟಿನ್ ಅವ್ಯವಹಾರ; ರಾಮದಾಸ್ ಆರೋಪ ಸತ್ಯಕ್ಕೆ ದೂರ: ಯು.ಟಿ ಖಾದರ್

Published:
Updated:

ಮಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಗೆ ಸಂಬಂಧಿಸಿದಂತೆ ₹5೦ ಕೋಟಿ ಅವ್ಯವಹಾರ ನಡೆದಿರುವುದಾಗಿ ಪ್ರತಿಪಕ್ಷದ ಶಾಸಕ ರಾಮದಾಸ್ ಮಾಡಿರುವ ಆರೋಪ‌ ಸತ್ಯಕ್ಕೆ ದೂರವಾಗಿದೆ ಎಂದು ವಸತಿ ಖಾತೆ ಸಚಿವ ಯು.ಟಿ ಖಾದರ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮೂಲಕ ಬಡಜನರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡಲಾಗುತ್ತಿದೆ. ಇದು ಸಾಕಷ್ಟು ಜನಪ್ರಿಯವಾಗಿದೆ‌. ಇದನ್ನು ಸಹಿಸದ ಪ್ರತಿಪಕ್ಷದ ಸದಸ್ಯರು ಈ ರೀತಿಯ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದರು.

ಇಂದಿರಾ ಕ್ಯಾಂಟೀನ್ ಯೋಜನೆಗೆ ಒಟ್ಟು ₹೨೧೧ ಕೋಟಿ ಮೀಸಲಿಟ್ಟಿದ್ದು, ₹ ೧೧೩ ಕೋಟಿ ಖರ್ಚು ಮಾಡಲಾಗಿದೆ. ೧೩೬ ಕ್ಯಾಂಟೀನ್ ಪೈಕಿ ೭೨ ಆರಂಭಗೊಂಡಿವೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !