ಭಾನುವಾರ, ಆಗಸ್ಟ್ 25, 2019
23 °C

ಇನ್ಫೊಸಿಸ್ ಉದ್ಯೋಗಿ ಸಾವು

Published:
Updated:

ಶ್ರೀರಂಗಪಟ್ಟಣ: ಇಲ್ಲಿನ ಕಾವೇರಿ ಸಂಗಮಕ್ಕೆ ತಾಯಿಯ ಪಿಂಡ ಪ್ರದಾನ ಮಾಡಲು ಬಂದಿದ್ದ, ಬೆಂಗಳೂರಿನ ಇನ್ಫೊಸಿಸ್‌ ಉದ್ಯೋಗಿಯೊಬ್ಬರು ಗುರು ವಾರ ಕಾವೇರಿ ನದಿಯ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ಶ್ರೀನಿವಾಸಮೂರ್ತಿ ಹಾಗೂ ಅಂಬುಜಮ್ಮ ಅವರ ಪುತ್ರ ಶ್ರೀಕಾಂತ್ (52) ಮೃತಪಟ್ಟವರು. ಮೃತದೇಹ ಕಾವೇರಿ ಸಂಗಮ ದಿಂದ 3 ಕಿ.ಮೀ. ದೂರದ ಮಹದೇವಪುರ ಸೇತುವೆ ಬಳಿ ಸಂಜೆ ದೊರೆಯಿತು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಶೋಧಕಾರ್ಯ ನಡೆಸಿದರು.

Post Comments (+)