ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿ ಪ್ರಕಟ

ಆರು ಸಂಶೋಧಕರಿಗೆ ತಲಾ ₹ 72 ಲಕ್ಷ ನಗದು
Last Updated 13 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಇಬ್ಬರು ವಿಜ್ಞಾನಿಗಳೂ ಸೇರಿ ಒಟ್ಟು ಆರು ಸಂಶೋಧಕರಿಗೆ ‘ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನ’ದ 2018 ರ ಸಾಲಿನ ವಿಜ್ಞಾನ ಪ್ರಶಸ್ತಿ ಪ್ರಕಟಿಸಲಾಯಿತು.

ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೇಶ– ವಿದೇಶಗಳ ಸಂಶೋಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ವಿಜ್ಞಾನದ ಶಾಖೆಗಳಲ್ಲದೇ, ಸಮಾಜ ವಿಜ್ಞಾನ ಮತ್ತು ಮಾನವಿಕ ಕ್ಷೇತ್ರಗಳೂ ಸೇರಿ ಒಟ್ಟು ಆರು ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ₹72 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಜನವರಿ 5 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಖ್ಯಾತ ಗಣಿತಜ್ಞ ಮಂಜುಲ್ ಭಾರ್ಗವ್‌ ಭಾಗವಹಿಸಲಿದ್ದಾರೆ.

ಈ ಬಹುಮಾನದಿಂದ ಸಂಶೋಧಕರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ನಡೆಸಲು ಮತ್ತು ದೊಡ್ಡ ಗುರಿ ಸಾಧನೆಗೆ ಪ್ರೋತ್ಸಾಹ ನೀಡಿ
ದಂತಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ದಿನೇಶ್‌ ಹೇಳಿದರು. ಇನ್ಫೊಸಿಸ್‌ ಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಹಾಜರಿದ್ದರು.

ಪ್ರಶಸ್ತಿಗಳು:

* ನವಕಾಂತ್‌ ಭಟ್‌ - ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ವಿಜ್ಞಾನ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು.

* ಎಸ್‌.ಕೆ.ಸತೀಶ್‌ - ಭೌತ ವಿಜ್ಞಾನ ವಿಭಾಗ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು.

* ಕವಿತಾ ಸಿಂಗ್‌ - ಮಾನವಿಕ ವಿಭಾಗ, ಕಲೆ ಮತ್ತು ಸೌಂದರ್ಯಶಾಸ್ತ್ರ ವಿಭಾಗ, ಜೆಎನ್‌ಯು

* ರೂಪ್ ಮಲ್ಲಿಕ್ - ಜೀವ ವಿಜ್ಞಾನಗಳ ವಿಭಾಗ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಮುಂಬೈ

* ನಳಿನಿ ಅನಂತರಾಮನ್ - ಗಣಿತ ವಿಭಾಗ, ಗಣಿತ ಅಧ್ಯಯನ ಸಂಸ್ಥೆ, ಯುನಿವರ್ಸಿಟಿ ಆಫ್‌ ಸ್ಟ್ರಾಸ್ಬರ್ಗ್(ಫ್ರಾನ್ಸ್‌)

* ಸೆಂಧಿಲ್‌ ಮುಲೈನಾಥನ್ -ಸಮಾಜ ವಿಜ್ಞಾನ ವಿಭಾಗ, ಶಿಕಾಗೊ ವಿಶ್ವವಿದ್ಯಾಲಯ, ಅಮೆರಿಕ

**

ಸಾಧನೆಗೆ ಶಿವರಾಮ ಕಾರಂತರು ಪ್ರೇರಣೆ
‘ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದು. ಆಗಿನಿಂದಲೂ ಓದುವ ಹವ್ಯಾಸವಿತ್ತು. ಅದರಲ್ಲೂ ಶಿವರಾಮಕಾರಂತರ ಕಾದಂಬರಿಗಳನ್ನು ಓದಿಕೊಂಡಿದ್ದೆ. ಇದು ನನ್ನ ಬೆಳವಣಿಗೆಗೆ ಸಹಾಯಕವಾಯಿತು’ ಎಂದು ಪ್ರಶಸ್ತಿ ವಿಜೇತ ನವಕಾಂತ ಭಟ್‌ ಹೇಳಿದರು.

ವಿಜ್ಞಾನ ಕ್ಷೇತ್ರದಲ್ಲಿ ಇರುವವರು ಒಂದು ವಿಷಯಕ್ಕೆ ಮಾತ್ರ ಸೀಮಿತರಾಗಿರುತ್ತಾರೆ. ವಿಜ್ಞಾನದ ವಿದ್ಯಾರ್ಥಿಗಳು ಸಾಹಿತ್ಯವನ್ನು ಓದಬೇಕು ಇದರಿಂದ ವೈಯಕ್ತಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಪ್ರಶಸ್ತಿ ಪ್ರಕಟಣೆ ಬಳಿಕ ಹೇಳಿದರು.

ವಿಜ್ಞಾನ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಚಿಂತನೆ ನಡೆಸಬೇಕು. ಆಗ ಮಾತ್ರ ಹೊಸತನ್ನು ಸಾಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT