ಬುಧವಾರ, ಜನವರಿ 22, 2020
21 °C

ಇಂಜೆಕ್ಷನ್‌ ಅಡ್ಡಪರಿಣಾಮ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ತಾಲ್ಲೂಕಿನ ಕಸಬಾಲಿಂಗಸುಗೂರು ಗ್ರಾಮದ ಸುವರ್ಣಮ್ಮ ಗಂಗಪ್ಪ ಬಡಿಗೇರ (45) ಹಲ್ಲು ನೋವಿಗಾಗಿ ಆರ್‌ಎಂಪಿ ವೈದ್ಯನಿಂದ ಪಡೆದ ಇಂಜೆಕ್ಷನ್‌ ಅಡ್ಡಪರಿಣಾಮ ಬೀರಿದ್ದರಿಂದ ಮಂಗಳವಾರ ಮೃತಪಟ್ಟಿದ್ದಾರೆ.

ಆರೋಪಿ ವೈದ್ಯ ಕಳ್ಳಿಲಿಂಗಸುಗೂರಿನ ಶಿವಪ್ಪ ಶರಣಪ್ಪ ಗಾಣಿಗೇರ (24) ಸುವರ್ಣಮ್ಮ ಅವರ ಮನೆಗೆ ಹೋಗಿ ಇಂಜೆಕ್ಷನ್‌ ಕೊಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಬಾಯಲ್ಲಿ ನೊರೆ ಬಂದಿದ್ದರಿಂದ ಕೂಡಲೇ ತಾಲ್ಲೂಕು ಆಸ್ಪತ್ರೆಗೆ ಕರೆತಂದಾಗ, ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು