ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಕಾಫಿಗೆ ಮನಸೋತ ಪ್ರವಾಸಿಗರು

ಮಡಿಕೇರಿ: ಕಾರಗುಂದದಲ್ಲಿ ‘ಅಂತರರಾಷ್ಟ್ರೀಯ ಕಾಫಿ ದಿನಾಚರಣೆ’
Last Updated 1 ಅಕ್ಟೋಬರ್ 2019, 14:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ಆಶ್ರಯದಲ್ಲಿ ‘ಅಂತರರಾಷ್ಟ್ರೀಯ ಕಾಫಿ ದಿನಾಚರಣೆ’ ಅಂಗವಾಗಿ ಕಾರುಗುಂದದಲ್ಲಿ ಶಾಲಾ ಮಕ್ಕಳಿಗೆ, ತಲಕಾವೇರಿಗೆ ತೆರಳುವ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಉಚಿತ ಕಾಫಿ ನೀಡಿ ಕಾಫಿ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರವಾಸಿಗರು ಕೊಡಗಿನ ಕಾಫಿ ರುಚಿ ಆಸ್ವಾದಿಸ ಮನಸೋತರು.

ಕುಮಾರೀಸ್ ಕಿಚನ್ ಹೋಮ್‌ ಸ್ಟೇಯಲ್ಲಿ ಆಯೋಜಿಸಿದ್ದ ಕಾಯ೯ಕ್ರಮದಲ್ಲಿ ಕೊಡಗು ವುಮೆನ್ ಕಾಫಿ ಅವೆರ್ನೆಸ್ ಸಂಸ್ಥೆಯ ಸಹಯೋಗ ನೀಡಿತ್ತು.

ಸ್ವಾದಿಷ್ಟ ಕಾಫಿ ಸವಿದ ಕ್ರೇಜಿಸ್ಟಾರ್: ಹೋಮ್‌ ಸ್ಟೇ ಪಕ್ಕದಲ್ಲಿಯೇ ‘ರವಿ ಬೋಪಣ್ಣ’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ‘ಕ್ರೇಜಿಸ್ಟಾರ್’ ರವಿಚಂದ್ರನ್ ಕಾಫಿ ದಿನಾಚರಣೆಯಲ್ಲಿ ಭಾಗಿಯಾಗಿ, ಅವರೂ ಕೊಡಗಿನ ಕಾಫಿ ರುಚಿ ಸವಿದರು.

ಕಾಫಿ ಜಾಗೃತಿ ಸಂಸ್ಥೆಯ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ ಮಾತನಾಡಿ, ‘ಕಾಫಿ ದಿನಾಚರಣೆಯಂದು ಮೂರು ವರ್ಷಗಳಿಂದ ಪ್ರವಾಸಿಗರಿಗೆ ಉಚಿತ ಕಾಫಿ ವಿತರಿಸಲಾಗುತ್ತಿದೆ. ಕಾಫಿ ಬೆಳೆಯಲು ತಾಂತ್ರಿಕ ಸಹಾಯ, ಪೂರಕ ವೈಜ್ಞಾನಿಕ ಸೇವೆಯ ಬಗ್ಗೆ ಕಾರ್ಯಾಗಾರಗಳನ್ನು ಕೂಡ ಸಂಸ್ಥೆ ವತಿಯಿಂದ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಂಜೆಯವರೆಗೂ ಸಂಸ್ಥೆ ವತಿಯಿಂದ ಸ್ವಾದಿಷ್ಟ ಮತ್ತು ಬಿಸಿ ಕಾಫಿಯನ್ನು ವಿತರಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ, ಜಂಟಿ ಕಾರ್ಯದರ್ಶಿ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ, ಪ್ರಮುಖರಾದ ಕಾಯಪಂಡ ಸುಮಾ ತಿಮ್ಮಯ್ಯ, ಕುಟ್ಟೇಟಿರ ಕುಮಾರಿ ಕುಂಞಪ್ಪ, ಕುಟ್ಟೇಟಿರ ಗ್ರೇಸಿ ಉದಯ್ ಹಾಜರಿದ್ದರು. ಸಿಪಿಎ ಅಧ್ಯಕ್ಷ ಬೆಳ್ಯಪ್ಪ ಮಣಿ ಕುಂಜ್ಞಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT