ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಲ್ಲಿ ಚಿತ್ತಾರ ಮೂಡಿಸಿದ ಗಾಳಿಪಟಗಳು

ಅಭಯ ಪಾಟೀಲರಿಂದ ಗೋವಾದಲ್ಲಿ ಉತ್ಸವ
Last Updated 17 ಜನವರಿ 2019, 13:08 IST
ಅಕ್ಷರ ಗಾತ್ರ

ಬೆಳಗಾವಿ: ಗೋವಾದ ರಿವಾ ಬೀಚ್‌ನ ಕಡಲತಡಿ ಎಂದಿನಂತಿರಲಿಲ್ಲ. ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿದದ್ದವು. ಚಿಣ್ಣರ ಕೇಕೆ, ಯುವಕ–ಯುವತಿಯರ ಶಿಳ್ಳೆ–ಚಪ್ಪಾಳೆಗಳ ಸುರಿಮಳೆಯೊಂದಿಗೆ ಪತಂಗಗಳು ಗಾಳಿಯಲ್ಲಿ ನೃತ್ಯ ಮಾಡಿದವು.

– ಈ ದೃಶ್ಯಗಳು ಕಂಡುಬಂದಿದ್ದು, ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅಲ್ಲಿ ಆಯೋಜಿಸಿರುವ 6ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ.

ಲೋಹದ ಹಕ್ಕಿಗೆ ಸವಾಲು ಹಾಕಿದಂತೆ ಆಗಸಕ್ಕೆ ಚಿಮ್ಮಿದ ವಿವಿಧ ಚಿತ್ತಾರದ ಗಾಳಿಪಟಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ಫೈಟರ್, ರಾಷ್ಟ್ರಧ್ವಜ ಟ್ರೈನ್ ಕೈಟ್, ಆಕ್ಟೋಪಸ್, ಹನುಮಾನ ಕೈಟ್ ಮೊದಲಾದವುಗಳು ಬಾನಂಗಳದಲ್ಲಿ ಚಿತ್ತಾರ ಬಿಡಿಸಿದವು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಬಣ್ಣ–ಬಣ್ಣದ ಗಾಳಿಪಟ ಹಾರಿಸಿ ಖುಷಿಪಟ್ಟರು. ಇದರೊಂದಿಗೆ, ಉತ್ಸವವು ನೋಡುಗರ ಕಣ್ಮನ ಸೆಳೆಯಿತು.

ಚಾಲನೆ ನೀಡಿದ ಗೋವಾ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ದಯಾನಂದ ಸೋಪ್ಟೆ ಮಾತನಾಡಿ, ‘ಬೆಳಗಾವಿಯ ಶಾಸಕ ಅಭಯ ಪಾಟೀಲ ಗೋವಾದಲ್ಲಿ 6 ವರ್ಷಗಳಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಮೊದಲಾದ ಕಡೆಗಳಿಂದ ಗಾಳಿಪಟ ಹಾರಿಸುವವರು ಬಂದಿದ್ದರು.

ಪರಿವರ್ತನ ಪರಿವಾರದ ಪ್ರಮುಖರಾದ ಅಶೋಕ ನಾಯಕ, ದೀಪಕ ಗೋಜಗೇಕರ, ಪ್ರದೀಪ್ ಶೆಟ್ಟಿ, ಸಂದೇಶ ಸಾವಂತ, ಮನಿಷಾ ಕೋರ್ಗನಕರ, ಪವನ ಮೂರ್ಜೆ, ಅನಂತ ಗಡ್ಡೇಕರ, ಸೂರಜ ತಾಳಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT