ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸಾಧಕಿಯರಿಗೆ ‘ಭೂಮಿಕಾ’ ಪ್ರಶಸ್ತಿ

Last Updated 7 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ12ಜನ ಸಾಧಕಿಯರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಈಸ್ಟರ್ನ್ ಸಂಸ್ಥೆಯಿಂದ ನೀಡುವ ‘ಭೂಮಿಕಾ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಬೆಂಗಳೂರು ಅಜೆಂಡಾ ಟಾಸ್ಕ್‌ಫೋರ್ಸ್ ಸಹ ಸಂಸ್ಥಾಪಕಿ ಕಲ್ಪನಾಕರ್, ಅಂತರರಾಷ್ಟ್ರೀಯ ಈಜುಪಟು,ಅರ್ಜುನ್ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್,ಪತ್ರಕರ್ತೆ ಮಾಯಾ ಶರ್ಮಾ,ಸಾಮಾಜಿಕ ಕಾರ್ಯಕರ್ತೆ ಸುನಿತಾ ಕೃಷ್ಣನ್,ಅಂಕಣಗಾರ್ತಿ ಸಾದಿಕಾ ಪೀರ್ಬೊಯ್, ಸಾಲುಮರದ ತಿಮ್ಮಕ್ಕ,ಸಂಡೆ ಸೋಲ್ ಸಂತೆಯ ಸಂಸ್ಥಾಪಕಿ ಆಶಾ ರಾವ್,ಅರ್ಗ್ಯಮ್ ಸಂಸ್ಥೆಯ ರೋಹಿಣಿ ನೀಲೆಕಣಿ,ಟೇರ್ರಾ ಬ್ಲೂ ಸಂಸ್ಥಾಪಕಿ ರಾಜಲಕ್ಷ್ಮೀ ಬೊರ್ತಕುರು,ಆಸಿಡ್ ದಾಳಿಯ ಸಂತ್ರಸ್ಥೆ ಪ್ರಗ್ಯಾ ಪ್ರಸುನ್, ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ,ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ನಂದನಾ ರೆಡ್ಡಿ ಸೇರಿದಂತೆ12ಜನ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಈಸ್ಟರ್ನ್ ಸಂಸ್ಥೆಯು 80ಕ್ಕೂ ಹೆಚ್ಚು ಸಾಧಕಿಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮಾರ್ಚ್8ರಂದು ಬೆಂಗಳೂರಿನ ಕೋರಮಂಗಲನಲ್ಲಿರುವ ಧವನಂ ಸರೋವರನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಕ್ರೀಡಾ ಪಟು ಅಂಜು ಬಾಬಿ ಜಾರ್ಜ್ ಹಾಗೂ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಸ್ಟರ್ನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಿರೋಜ್ ಮಿರನ್ ವಹಿಸಿಕೊಳ್ಳಲಿದ್ದು ಸಂಸ್ಥೆಯ ಜನರಲ್ ಮ್ಯಾನೇಜರ್ ಕೃತಿಕಾ ಪಿ.ವಿ. ಭಾಗವಹಿಸಲಿದ್ದಾರೆ.

ಡಿಜೆ ಆಯೆಷಾ ಜೊತೆ...
ಜಗತ್ತಿನ ಹಲವು ನಗರಗಳಲ್ಲಿ ಕಾರ್ಯಕ್ರಮ ನೀಡಿರುವ ಡಿಜೆ ಆಯೆಷಾ ನಗರಕ್ಕೆ ಬರಲಿದ್ದಾರೆ. ಸ್ಥಳ– ದಿ ಅರೆನಾ ಆರ್ಟಿಸನಲ್‌ ಬ್ರ್ಯೂ ಕಿಚನ್‌, # 48, 100 ಅಡಿ ರಸ್ತೆ, ಡಿಫೆನ್ಸ್‌ ಕಾಲೊನಿ, ಇಂದಿರಾನಗರ.ರಾತ್ರಿ 9. ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT