ಮಹಿಳಾ ದಿನದ ವಿಶೇಷ ನೃತ್ಯೋತ್ಸವ

ಸೋಮವಾರ, ಮಾರ್ಚ್ 25, 2019
24 °C

ಮಹಿಳಾ ದಿನದ ವಿಶೇಷ ನೃತ್ಯೋತ್ಸವ

Published:
Updated:

ಅಂತರರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ, ಮಹಿಳೆಯರು ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ವೈಜಯಂತಿ ಕಾಶಿ ಅವರ ‘ಶಾಂಭವಿ ಸ್ಕೂಲ್‌ ಆಫ್‌ ಡಾನ್ಸ್‌’ ನಾಯ್ಕಾ ನೃತ್ಯೋತ್ಸವವನ್ನು ಆಯೋಜಿಸಿದೆ.

ನೃತ್ಯ ಕಲಾವಿದರು ಮತ್ತು ಗುರುಗಳಾದ ನರ್ಮದಾ, ಪದ್ಮಿನಿ ರಾಮಚಂದ್ರನ್‌ ಹಾಗೂ ರಾಧಾ ಶ್ರೀಧರ್‌ ಅವರ ಕೊಡುಗೆಯನ್ನು ಈ ನೃತ್ಯೋತ್ಸವ ಸ್ಮರಿಸಲಿದೆ. 

ಈ ಗುರುಗಳ ಬಳಿ ನೃತ್ಯಾಭ್ಯಾಸ ಮಾಡಿದ ಸೌಂದರ್ಯ ಶ್ರೀವತ್ಸ, ಕೃತಿ ರಾಮಗೋಪಾಲ್‌, ಐಶ್ವರ್ಯಾ ನಿತ್ಯಾನಂದ ಅವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಗುರುಗಳಿಗೆ ನುಡಿನಮನ ಸಲ್ಲಿಸಲಿದ್ದಾರೆ. ಯುವ ನೃತ್ಯ ಕಲಾವಿದರ ಸವಾಲುಗಳು, ಅವರ ಅನುಭವಗಳ ಕುರಿತು ಚರ್ಚೆ ಹಾಗೂ ವಿಚಾರ ವಿನಿಮಯ ನೃತ್ಯೋತ್ಸವದ ಮುಖ್ಯ ಭಾಗ.

ರಾಧಾ ಶ್ರೀಧರ್ ಅವರಿಗೆ ‘ನಾಟ್ಯಶಾಸ್ತ್ರ’ ಪ್ರಶಸ್ತಿ ಮತ್ತು ಸನ್ಮಾನ ಹಾಗೂ ಭರತನಾಟ್ಯಕ್ಕೆ ಅವರು ನೀಡಿರುವ ಕೊಡುಗೆಯನ್ನು ವಿಶೇಷವಾಗಿ ಗುರುತಿಸುವ ಕಾರ್ಯಕ್ರಮ ನಡೆಯಲಿದೆ. ಈ ಹಿಂದೆ ಡಾ.ಯಾಮಿನಿ ಕೃಷ್ಣಮೂರ್ತಿ, ಡಾ.ಶೋಭಾ ನಾಯ್ಡು, ಉಮಾ ರಮಾ ರಾವ್‌, ಸುಮತಿ ಕೌಶಲ್‌ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !