ಗುರುವಾರ , ಅಕ್ಟೋಬರ್ 24, 2019
21 °C

ಸೀಬರ್ಡ್ ನೌಕಾನೆಲೆಗೆ ನುಸುಳಲು ಯತ್ನ: ಸ್ವೀಡನ್ ಪ್ರಜೆಗೆ ನ್ಯಾಯಾಂಗ ಬಂಧನ

Published:
Updated:

ಕಾರವಾರ: ಸೀಬರ್ಡ್ ನೌಕಾನೆಲೆಗೆ ನುಸುಳಲು ಯತ್ನಿಸಿ ಶುಕ್ರವಾರ ಸಿಕ್ಕಿಬಿದ್ದ ಸ್ವೀಡನ್ ಪ್ರಜೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಆರೋಪಿ ಸ್ವೆನ್ ಅಲೆಕ್ಸಾಂಡರ್ ಸೆಗೆರ್ (27), ಗೋವಾದ ಕಾಣಕೋಣ ಕಡಲತೀರದಲ್ಲಿರುವ ‘ಸಂಪೂರ್ಣ’ ರೆಸಾರ್ಟ್‌ನಲ್ಲಿ ಯೋಗಾಭ್ಯಾಸಕ್ಕೆಂದು ಸೆ.18ರಂದು ಬಂದಿದ್ದ. ಅಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪ ಕೇಳಿಬಂದಿತ್ತು. ಹಾಗಾಗಿ ಆತನನ್ನು ರೆಸಾರ್ಟ್‌ನಿಂದ ಹೊರ ಹಾಕಲಾಗಿತ್ತು.

ಬಳಿಕ ಕಡಲ ಕಿನಾರೆಯಲ್ಲೇ ಸುಮಾರು 36 ಕಿ.ಮೀ ನಡೆದುಕೊಂಡು ಬಂದು ಕಾರವಾರಕ್ಕೆ ತಲುಪಿದ್ದ. ಸೀಬರ್ಡ್ ನೌಕಾನೆಲೆಯ ವ್ಯಾಪ್ತಿಯಲ್ಲಿರುವ ಕಾಮತ್ ಬೀಚ್ ಬಳಿ ಸಮುದ್ರದಲ್ಲಿ ಈಜಲು ಮುಂದಾಗಿದ್ದ. ಆಗ ಆತನನ್ನು ಬಂಧಿಸಿದ ನೌಕಾಪಡೆಯ ಭದ್ರತಾ ಸಿಬ್ಬಂದಿ ವಿಚಾರಣೆಯ ಬಳಿಕ ಕಾರವಾರ ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ನೀಡಿದ್ದರು. 

ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದು, ವಿಚಾರಣೆಗೂ ಸರಿಯಾಗಿ ಸಹಕರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)