ಶನಿವಾರ, ಆಗಸ್ಟ್ 17, 2019
27 °C

ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಆಹ್ವಾನ

Published:
Updated:

ಬೆಂಗಳೂರು: ಪತ್ರಕರ್ತ ಗೌರೀಶ್ ಅಕ್ಕಿ ಆರಂಭಿಸಿರುವ ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಮತ್ತು ಪಿ.ಜಿ.ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದೆ.

ಪತ್ರಿಕೆ, ಟಿ.ವಿ ಮಾಧ್ಯಮ, ರೇಡಿಯೊ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಸಮೀಕರಿಸಿದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಈ ಕೋರ್ಸ್‌ ಒಂದು ವರ್ಷ ಅವಧಿಯದ್ದಾಗಿದೆ. ಪಿಯುಸಿ ಪರೀಕ್ಷೆ ಉತ್ತೀರ್ಣರಾದವರು ಡಿಪ್ಲೊಮಾ ಕೋರ್ಸ್‌ಗೆ ಹಾಗೂ ಪದವೀಧರರು ಪಿ.ಜಿ.ಡಿಪ್ಲೊಮಾ ಪ್ರವೇಶಕ್ಕೆ ಅರ್ಹರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದವರಿಗೆ ವಿದ್ಯಾರ್ಥಿವೇತನ ವ್ಯವಸ್ಥೆ ಇದೆ. ತರಗತಿಗಳು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿವೆ.

ವಿಳಾಸ: ಎಎಂಸಿ ಸಿಟಿ ಕಾಲೇಜು, 33ನೇ ಕ್ರಾಸ್‌, 2ನೇ ಮುಖ್ಯರಸ್ತೆ, ಜಯನಗರ 7ನೇ ಬ್ಲಾಕ್‌, ಬೆಂಗಳೂರು

ಸಂಪರ್ಕಕ್ಕೆ: 7618746667, ಇಮೇಲ್‌: contact@almasuper media.com

Post Comments (+)