ಮೂರು ನಗರಗಳ ಪೊಲೀಸ್ ಕಮಿಷನರ್ ಬದಲು

7

ಮೂರು ನಗರಗಳ ಪೊಲೀಸ್ ಕಮಿಷನರ್ ಬದಲು

Published:
Updated:

ಬೆಂಗಳೂರು: ಮೂರು ನಗರಗಳ ಪೊಲೀಸ್ ಕಮಿಷನರ್‌ಗಳನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಹುಬ್ಬಳ್ಳಿ–ಧಾರವಾಡ ನಗರದ ಕಮಿಷನರ್ ಆಗಿದ್ದ ಎಂ.ಎನ್. ನಾಗರಾಜ್ ಅವರ ಜಾಗಕ್ಕೆ ಕೆಜಿಎಫ್‌ ಎಸ್ಪಿಯಾಗಿದ್ದ ಬಿ.ಎಸ್.ಲೋಕೇಶ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ.

ಮೈಸೂರು ನಗರ ಕಮಿಷನರ್‌ ಆಗಿದ್ದ ಎ. ಸುಬ್ರಹ್ಮಣ್ಯೇಶ್ವರರಾವ್‌ ಅವರ ಜಾಗಕ್ಕೆ ಬೆಂಗಳೂರು ಗುಪ್ತದಳ ಎಸ್ಪಿಯಾಗಿದ್ದ ಕೆ.ಟಿ. ಬಾಲಕೃಷ್ಣ ಹಾಗೂ ಬೆಳಗಾವಿ ನಗರ ಕಮಿಷನರ್ ಆಗಿದ್ದ ಡಿ.ಸಿ. ರಾಜಪ್ಪ ಜಾಗಕ್ಕೆ ಬೆಂಗಳೂರು ವೈರ್‌ಲೆಸ್‌ ವಿಭಾಗದ ಎಸ್ಪಿಯಾಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. 

ನಾಗರಾಜ್, ರಾಜಪ್ಪ, ರಾವ್ ಅವರಿಗೆ ಸ್ಥಳ ತೋರಿಸಿಲ್ಲ.

ಬೆಂಗಳೂರು ಗೃಹ ರಕ್ಷಕದಳದ ಕಮಾಂಡೆಂಟ್ ಆಗಿದ್ದ ಆರ್.ರಮೇಶ್ ಅವರನ್ನು ಯೋಜನೆ, ಆಧುನೀಕರಣದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !