ಶುಕ್ರವಾರ, ಏಪ್ರಿಲ್ 10, 2020
19 °C
6 ಪೊಲೀಸ್ ಅಧಿಕಾರಿಗಳಿಗೆ ಬಡ್ತಿ

ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆರು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ್ದರೆ, 24 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ 30 ಅಧಿಕಾರಿಗಳನ್ನು ಒಮ್ಮೆಲೆ ವರ್ಗಾವಣೆ ಮಾಡಿದಂತಾಗಿದೆ.

ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಬಡ್ತಿ ಪಡೆದವರು: ಬೆಂಗಳೂರು ರೈಲ್ವೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಅವರನ್ನು ಕಾರಾಗೃಹ ವಿಭಾಗದ ಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಕಾರಾಗೃಹ ಇಲಾಖೆ ಎಡಿಜಿಪಿ ಎನ್.ಎಸ್.ಮೇಘರಿಕ್ ಅವರನ್ನು ಸಿಐಡಿ ಡಿಜಿಪಿಯನ್ನಾಗಿ ವರ್ಗಾಯಿಸಿದ್ದು, ಸಂಪರ್ಕ ಹಾಗೂ ಆಧುನೀಕರಣ ವಿಭಾಗದ ಎಡಿಜಿಪಿ ಡಾ.ಆರ್.ಪಿ.ಶರ್ಮಾ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ಡಿಜಿಪಿಯನ್ನಾಗಿ ವರ್ಗಾಯಿಸಲಾಗಿದೆ.

ಎ.ಎಂ.ಪ್ರಸಾದ್ ಅವರನ್ನು ಗೃಹ ರಕ್ಷಕ ದಳದ ಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದವರು: ಪೂರ್ವ ವಲಯ (ದಾವಣಗೆರೆ) ಐಜಿಪಿ ಅಮೃತ್ ಪಾಲ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಗೆ, ಐಜಿಪಿ ಉಮೇಶ್ ಕುಮಾರ್ ಅವರನ್ನು ಗೃಹ ಇಲಾಖೆಯ ಎಡಿಜಿಪಿ ಹುದ್ದೆಗೆ, ಪಶ್ಚಿಮ ವಲಯ (ಮಂಗಳೂರು) ಐಜಿಪಿ ಜೆ.ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ರೈಲ್ವೆ ವಿಭಾಗದ ಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದವರು:ಪಿ.ಎಸ್.ಸಂಧು– ಎಡಿಜಿಪಿ, ಆಂತರಿಕ ಭದ್ರತೆ, ಬೆಂಗಳೂರು; ಟಿ.ಸುನಿಲ್ ಕುಮಾರ್, ಎಡಿಜಿಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು; ಸಿ.ಎಚ್.ಪ್ರತಾಪರೆಡ್ಡಿ, ಎಡಿಜಿಪಿ, ಸಂವನ, ಸಾಗಣೆ, ಆಧುನೀಕರಣ ವಿಭಾಗ; ಸೀಂತಕುಮಾರ ಸಿಂಗ್, ಐಜಿಪಿ, ಪಶ್ಚಿಮ ವಲಯ (ಮಂಗಳೂರು), ಹರಿಶೇಖರನ್, ಐಜಿಪಿ, ತರಬೇತಿ ವಿಭಾಗ; ಸೌಮೇಂದು ಮುಖರ್ಜಿ, ಐಜಿಪಿ ಮತ್ತು ಎಸಿಪಿ, ಬೆಂಗಳೂರು ಪಶ್ಚಿಮ; ಎಸ್.ರವಿ, ಐಜಿಪಿ, ಆಂತರಿಕ ಭದ್ರತೆ ವಿಭಾಗ; ಪವಾರ್ ಪ್ರವೀಣ್ ಮಧುಕರ್– ಡಿಐಜಿ, ಆಡಳಿತ ವಿಭಾಗ; ಕೆ.ಟಿ.ಬಾಲಕೃಷ್ಣ– ಡಿಐಜಿ, ನೇಮಕಾತಿ ವಿಭಾಗ; ಡಾ.ಚಂದ್ರಗುಪ್ತ– ಡಿಐಜಿ ಹಾಗೂ ಪೊಲೀಸ್ ಕಮಿಷನರ್, ಮೈಸೂರು.

ಅನುಪಮ್ ಅಗರವಾಲ್– ಎಸ್‌ಪಿ, ವಿಜಯಪುರ; ಡಾ.ರಾಮ್‌ನಿವಾಸ್ ಸೆಪಟ್– ಎಸ್‌ಪಿ, ಭ್ರಷ್ಟಾಚಾರ ನಿಗ್ರಹದಳ, ಬೆಂಗಳೂರು; ಪಾಟೀಲ್ ವಿನಾಯಕ ವಸಂತರಾವ್– ಎಸ್‌ಪಿ, ವಿಧಿವಿಜ್ಞಾನ ಪ್ರಯೋಗಾಲಯ; ನಿಕ್ಕಂ ಪ್ರಕಾಶ್ ಅಮೃತ್– ಎಸ್‌ಪಿ (ಭದ್ರತೆ), ಗುಪ್ತಚರ, ಬೆಂಗಳೂರು; ಜಿ.ರಾಧಿಕಾ– ಎಸ್‌ಪಿ, ಚಿತ್ರದುರ್ಗ; ಡಾ.ಕೆ.ಅರುಣ್– ಎಸ್‌ಪಿ, ಭದ್ರತೆ, ಬಿಎಂಟಿಸಿ; ಡಿ.ಎಲ್‌.ನಾಗೇಶ್, ಎಸ್‌ಪಿ, ಬೀದರ್; ಆರ್.ಶ್ರೀನಿವಾಸಗೌಡ, ಎಸ್‌ಪಿ, ಹಾಸನ; ಎನ್.ಯತೀಶ್, ಎಸ್‌ಪಿ, ಗದಗ; ಟಿ.ಶ್ರೀಧರ, ಎಸ್‌ಪಿ, ಗುಪ್ತಚರ ಬೆಂಗಳೂರು.

ಜಿಣೇಂದ್ರ ಖಣಗಾವಿ– ಎಸ್‌ಪಿ, ಪೊಲೀಸ್ ತರಬೇತಿ ಶಾಲೆ, ಚೆನ್ನಪಟ್ಟಣ; ಕೆ.ವಿ.ಜಗದೀಶ– ಎಐಜಿಪಿ, ಡಿಜಿಪಿ ಕಚೇರಿ, ಬೆಂಗಳೂರು; ನಾರಾಯಣ್– ಡಿಸಿಪಿ, ಬೆಂಗಳೂರು ಸಂಚಾರ ಪೂರ್ವ ವಿಭಾಗ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು