96 ಸಾಧಕರು, ತಂಡಗಳಿಗೆ ಇಸ್ರೊ ಪ್ರಶಸ್ತಿ ಪ್ರದಾನ

ಮಂಗಳವಾರ, ಮಾರ್ಚ್ 26, 2019
27 °C

96 ಸಾಧಕರು, ತಂಡಗಳಿಗೆ ಇಸ್ರೊ ಪ್ರಶಸ್ತಿ ಪ್ರದಾನ

Published:
Updated:
Prajavani

ಬೆಂಗಳೂರು: ಇಸ್ರೊದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ಶ್ರಮಿಸಿದ 96 ವ್ಯಕ್ತಿಗಳು ಮತ್ತು ತಂಡಗಳಿಗೆ ಇಸ್ರೊ ಅಂತರಿಕ್ಷ ಭವನದಲ್ಲಿ ಬುಧವಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಹಲವು ವಿಜ್ಞಾನಿಗಳು ಮತ್ತು ತಂಡಗಳು ಸಂಸ್ಥೆಯ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಆದ್ದರಿಂದ ಇವರಿಗೆ ‘ಇಸ್ರೊ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರತಿಷ್ಠಿತ ಎನಿಸಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್‌ ತಿಳಿಸಿದರು.

‘ಏಕ ಮನಸ್ಸು, ಶ್ರದ್ಧೆಯಿಂದ ಸವಾಲುಗಳನ್ನು ತೆಗೆದುಕೊಂಡು ಗುರಿ ಸಾಧಿಸಬೇಕು. ನಿಮ್ಮೆಲ್ಲರ ಸಾಧನೆಯಿಂದಾಗಿಯೇ ಸಂಸ್ಥೆ ಎತ್ತರಕ್ಕೆ ಬೆಳೆದಿದೆ’ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ಹೇಳಿದರು.

ಈ ವರ್ಷ ಯುವ ವಿಜ್ಞಾನಿ ವಿಭಾಗದ ಪ್ರಶಸ್ತಿ ವಿಭಾಗದಲ್ಲಿ 50, ಮೆರಿಟ್‌ ಪ್ರಶಸ್ತಿ ವಿಭಾಗದಲ್ಲಿ 20,  ನಿರ್ವಹಣಾ ಶ್ರೇಷ್ಠತೆ ಪ್ರಶಸ್ತಿ ವಿಭಾಗದಲ್ಲಿ 10 ಮತ್ತು ತಂಡ ಶ್ರೇಷ್ಠತೆ ವಿಭಾಗದಲ್ಲಿ 16 ಜನರಿಗೆ ಪ್ರಶಸ್ತಿ ನೀಡಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !