ಶನಿವಾರ, ಮೇ 15, 2021
26 °C

ಐಟಿ ವಿಚಾರಣೆಗೆ ಜಿ.ಪರಮೇಶ್ವರ ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಡಾ.ಜಿ.ಪರಮೇಶ್ವರ ಅವರು ಮಂಗಳವಾರ ವಿಚಾರಣೆಗಾಗಿ ಆದಾಯ ತೆರಿಗೆ ಕಚೇರಿಗೆ ಹಾಜರಾಗಿದ್ದಾರೆ. 

ಸಿದ್ಧಾರ್ಥ ಕಾಲೇಜಿನ ಮೇಲೆ ನಡೆಸಿದ್ದ ಐಟಿ ದಾಳಿ ಸಂಬಂಧ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಪರಮೇಶ್ವರ್‌ ಅವರಿಗೆ ತಿಳಿಸಿದ್ದರು. ಅದರಂತೆ ಅವರು ನಗರದ ಕ್ವೀನ್ಸ್‌ ರಸ್ತೆಯಲ್ಲಿನ ಐಟಿ ಕಚೇರಿಗೆ ಹಾಜರಾಗಿದ್ದಾರೆ.

* ಇದನ್ನೂ ಓದಿ: ಐ.ಟಿ ದಾಳಿ: ₹100 ಕೋಟಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ

ಐಟಿ ದಾಳಿಯಾದ ಎರಡು ದಿನದ ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿದ್ದ ಪರಮೇಶ್ವರ್‌ ಅವರು, ’ಮನೆಯಲ್ಲಿ ಹಣ ಸಿಕ್ಕರೆ ಅದನ್ನು ನಾನು ಮುಚ್ಚಿಡಲು ಆಗಲ್ಲ. ಹಣವಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆದ್ದರಿಂದ, ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ, ಅಂದು ಹಾಜರಾಗುವೆ‘ ಎಂದು ತಿಳಿಸಿದ್ದರು.

ಐಟಿ ದಾಳಿ ನಡೆದ ಬಳಿಕ ಪರಮೇಶ್ವರ ಅವರ ಆಪ್ತ ಸಂತೋಷ್‌ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವನ್ನೂ ಓದಿ...

ಪರಮೇಶ್ವರ ಆಪ್ತ ರಮೇಶ್ ಡೈರಿಗಳು ಪತ್ತೆ?

ಕಾಂಗ್ರೆಸ್‌ ಮುಖಂಡರಾದ ಪರಮೇಶ್ವರ, ಜಾಲಪ್ಪ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಐ.ಟಿ ದಾಳಿ

ಜಿ.ಪರಮೇಶ್ವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ

ಐಟಿ ದಾಳಿ | ಮಂಗಳವಾರ ವಿಚಾರಣೆಗೆ ಹಾಜರಾಗುವೆ, ಪ್ರತಿಭಟನೆ ಬೇಡ: ಪರಮೇಶ್ವರ

ಐ.ಟಿ. ಅಧಿಕಾರಿಗಳ ಕಿರುಕುಳದಿಂದ ಪತಿ ಆತ್ಮಹತ್ಯೆ: ರಮೇಶ್ ಪತ್ನಿ ಸೌಮ್ಯಾ ಅಳಲು

‘ಅಪ್ಪ, ನಮ್ಮನ್ನು ಬಿಟ್ಟು ಹೋದಿಯಲ್ಲಪ್ಪ’

ರಮೇಶ್ ಆತ್ಮಹತ್ಯೆ ಬಳಿಕ ಐ.ಟಿ ಶೋಧ ಮೊಟಕು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು