‘ಸಿದ್ಧಗಂಗಾಶ್ರೀ ಗುಣಮುಖರಾಗಲು ಸಮಯ ಬೇಕು’

7

‘ಸಿದ್ಧಗಂಗಾಶ್ರೀ ಗುಣಮುಖರಾಗಲು ಸಮಯ ಬೇಕು’

Published:
Updated:
Prajavani

ತುಮಕೂರು: ‘ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಪೂರ್ಣ ಗುಣಮುಖ ರಾಗಲು ಇನ್ನೂ ಬಹಳಷ್ಟು ಸಮಯ ಬೇಕಾಗುತ್ತದೆ’ ಎಂದು ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ತಿಳಿಸಿದರು.

‘ಭಾನುವಾರ ರಾತ್ರಿ ಅಲ್ಬುಮಿನ್ ಎಂಬ ಪ್ರೊಟೀನ್ ಅಂಶ ಹೆಚ್ಚಾಗಿದೆ. ‘ಪ್ಲಾಸ್ಮಾ ಅಲ್ಟ್ರಾ ಫಿಲ್ಟ್ರೇಷನ್’ ವಿಧಾನ ಅನುಸರಿಸಿ ಚಿಕಿತ್ಸೆ ನೀಡಲಾಯಿತು. ಇದರ ವಿಶೇಷತೆ ಏನೆಂದರೆ ಎಂಡೋಟಾಕ್ಸಿನ್ಸ್‌ ಮತ್ತು ಬ್ಯಾಕ್ಟಿರೀಯಾ ಶುದ್ಧೀಕರಣ ಮಾಡಿ ಮತ್ತೆ ರಕ್ತ ಪರಿಚಲನೆಗೆ ಸಹಕಾರಿಯಾಗುವಂತಹ ಹೊಸ ಚಿಕಿತ್ಸಾ ವಿಧಾನವಾಗಿದೆ. ಈ ಪ್ರಯತ್ನದಿಂದ ಸ್ವಾಮೀಜಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ’ ಎಂದು ಮಾಧ್ಯಮದವರಿಗೆ ಹೇಳಿದರು.

‘ಸೋಮವಾರ ಬೆಳಿಗ್ಗೆ ರಕ್ತ ಪರೀಕ್ಷೆ ಮಾಡಿದಾಗ ಸೋಂಕು ಕಡಿಮೆ ಆಗಿ, ಪ್ರೊಟೀನ್ ಪ್ರಮಾಣವು ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಭಾನುವಾರ ರಾತ್ರಿಯಿಂದ ಯಾವುದೇ ರೀತಿಯ ದ್ರವರೂಪದ ಆಹಾರ ಕೊಡುತ್ತಿಲ್ಲ. ‘ಅಲ್ಬುಮಿನ್’ ಎಂಬ ಪ್ರೊಟೀನ್ ಅಂಶ ಕಡಿಮೆ ಆದಾಗ ನೀರು ತುಂಬಿಕೊಳ್ಳುತ್ತದೆ. ಈ ಪ್ರೊಟೀನ್ ಅಂಶ ಈಗ ಹೆಚ್ಚಾಗುತ್ತಿರುವುದರಿಂದ ಸ್ವಾಮೀಜಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !