ಟ್ವಿಟರ್‌ನಲ್ಲಿ ರತ್ನಪ್ರಭಾ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಕೇಂದ್ರ ಸಚಿವ

7

ಟ್ವಿಟರ್‌ನಲ್ಲಿ ರತ್ನಪ್ರಭಾ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಕೇಂದ್ರ ಸಚಿವ

Published:
Updated:

ಬೆಂಗಳೂರು: ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಪಕ್ಷಕ್ಕೆ ಸೇರುವಂತೆ ಬಿಜೆಪಿಯಿಂದ ಆಹ್ವಾನ ಬಂದಿಲ್ಲ. ಸೇರಿಸಿಕೊಳ್ಳಿ ಎಂದು ನಾನೂ ಕೇಳಿಲ್ಲ’ ಎಂದು ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹೇಳಿಕೆ ನೀಡಿದ್ದಾರೆ. ಆದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತ್ರ ರತ್ನಪ್ರಭಾ ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಟ್ವಿಟ್ ಹಾಗೆಯೇ ಉಳಿಸಿಕೊಳ್ಳುವ ಮೂಲಕ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಬೆಳೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ರತ್ನಪ್ರಭಾ ಬಿಜೆಪಿಯ ಸ್ಪರ್ಧಿಯಾಗಲಿದ್ದಾರೆ ಎಂಬ ಮಾತುಗಳು ಭಾನುವಾರವೂ ಚಾಲ್ತಿಯಲ್ಲಿದ್ದವು. ಆದರೆ ಈ ಮಾತನ್ನು ಏಕೆ ತೇಲಿಬಿಡಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

‘ಬಿಜೆಪಿಗೆ ಸೇರಲು ಹಲವು ನಿವೃತ್ತ ಅಧಿಕಾರಿಗಳು ಆಸಕ್ತಿ ಹೊಂದಿದ್ದಾರೆ. ರತ್ನಪ್ರಭಾ ಸೇರ್ಪಡೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಇಲ್ಲಿಯವರೆಗೆ ಚರ್ಚೆ ನಡೆದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅನಂತಕುಮಾರ್ ಹೆಗಡೆ ಮಾತ್ರ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ರತ್ನಪ್ರಭಾ ಬಿಜೆಪಿ ಸೇರ್ಪಡೆ ಸುದ್ದಿಗೆ ‘ಕಾರ್ಯಾಂಗದಲ್ಲಿ ನಿಮಗೆ ಇರುವ ಅಪಾರ ಅನುಭವವು ರಾಜಕಾರಣಕ್ಕೂ ಬರಲಿ. ಜನರಿಗೆ ಸುಖ ನೆಮ್ಮದಿ ಸಿಗಲಿ’ ಎಂದು ಒಕ್ಕಣೆ ಬರೆದು ಟ್ವಿಟ್ ಮಾಡಿದ್ದಾರೆ.

‘ನೀವೊಬ್ಬ ಕೇಂದ್ರ ಸಚಿವ. ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದು ನಿಮಗಲ್ಲದೆ ಇನ್ಯಾರಿಗೆ ತಿಳಿದಿರಲು ಸಾಧ್ಯ’ ಎಂದು ಟ್ವಿಟರ್‌ನಲ್ಲಿಯೇ ಸಚಿವರನ್ನು ಪ್ರಶ್ನಿಸಲಾಗಿದೆ. ಆದರೆ ಬಹುತೇಕ ಕಾಮೆಂಟ್‌ಗಳು ರತ್ನಪ್ರಭಾ ಅವರನ್ನು ಸ್ವಾಗತಿಸಿವೆ, ಖರ್ಗೆ ಅವರನ್ನು ಟೀಕಿಸಿವೆ.

ರಾಜ್ಯ ರಾಜಕಾರಣದ ಈ ಬೆಳವಣಿಗೆಯ ಕೇಂದ್ರಬಿಂದು ಯಾವುದು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.


ರತ್ನಪ್ರಭಾ ಸೇರ್ಪಡೆ ಬಗ್ಗೆ ಅನಂತಕುಮಾರ್ ಹೆಗಡೆ ಮಾಡಿರುವ ಟ್ವೀಟ್

 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 3

  Frustrated
 • 8

  Angry

Comments:

0 comments

Write the first review for this !