ಭಾನುವಾರ, ಡಿಸೆಂಬರ್ 8, 2019
21 °C
ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರಿ

ಇ.ಡಿ ಡೀಲ್‌: ಸಿಸಿಬಿ ಪೊಲೀಸರಿಂದ ಜನಾರ್ದನ ರೆಡ್ಡಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇ.ಡಿ ಡೀಲ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿಯಲ್ಲಿ ಶನಿವಾರ ತಡ ರಾತ್ರಿಯವರೆಗೂ ಗಾಲಿ ಜನಾರ್ದನ ರೆಡ್ಡಿ ವಿಚಾರಣೆ ನಡೆಸಿರುವ ಪೊಲೀಸರು, ಇ.ಡಿ ಡೀಲ್ ಹಾಗೂ ವಂಚನೆ ಪ್ರಕರಣ ಸಂಬಂಧ ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ಭಾನುವಾರ ಮಧ್ಯಾಹ್ನ ಗಾಲಿ ಜನಾರ್ದನ ರೆಡ್ಡಿ ಹಾಗೂ ಆತನ ಆಪ್ತ ಆಲಿ ಖಾನ್‌ನ್ನು ಬಂಧಿಸಿದ್ದಾರೆ.

‘ಶನಿವಾರ ವಿಚಾರಣೆ ಮಾಡಿದ್ದೇವೆ. ತಡ ರಾತ್ರಿ ವರೆಗೂ ಸಾಕ್ಷಿಗಳ ಪರಿಶೀಲನೆ ಮಾಡಿದ್ದು, ದಸ್ತಗಿರಿ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ವೈದ್ಯಕೀಯ ಪರೀಕ್ಷೆಯ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದೇವೆ. ಕೇಂದ್ರ ತನಿಖಾ ತಂಡದ ಹೆಸರು ಬಳಸಿ ₹20 ಕೋಟಿ ಹಣ ವಂಚನೆಗೆ ಸಂಬಂಧಿಸಿದಂತೆ; ಹಣ ಲಪಟಾಯಿಸಿರುವ ಕುರಿತು ಸಾಕ್ಷಿಗಳು ಇದ್ದು, ಹಣವನ್ನು ಮರುಪಡೆಯಲು ಸೂಕ್ತ ಕ್ರಮವನ್ನು ವಹಿಸಿದ್ದೇವೆ’ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಬಂಧನ ಖಚಿತ ಪಡಿಸಿದರು.

ಇದನ್ನೂ ಓದಿ: ಇ.ಡಿ ಡೀಲ್‌: ರೆಡ್ಡಿಗೆ ಸಿಸಿಬಿ ಡ್ರಿಲ್

ಸದ್ಯ ಸಿಸಿಬಿ ಕಚೇರಿಯಲ್ಲಿರುವ ರೆಡ್ಡಿಯನ್ನು ಪೊಲೀಸರು, ಕೆಲವೇ ನಿಮಿಷಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಿದ್ದಾರೆ. ನಂತರ, ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಲಿದ್ದಾರೆ. ಪುನಃ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು