ಶನಿವಾರ, ಡಿಸೆಂಬರ್ 7, 2019
25 °C

ರೆಡ್ಡಿ ಬಿಜೆಪಿಯಲ್ಲಿ ಇಲ್ಲ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಾರಿ ನಿರ್ದೆಶನಾಲಯ (ಇ.ಡಿ) ತನಿಖೆ ಮೇಲೆ ಪ್ರಭಾವ ಬೀರುವುದಾಗಿ ₹ 20 ಕೋಟಿ ಡೀಲ್‌ ನಡೆಸಿದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ‘ಕಾನೂನು ಪ್ರಕಾರ ಯಾವೆಲ್ಲಾ ಪ್ರಕ್ರಿಯೆ ನಡೆಸಬೇಕೋ, ಅವುಗಳನ್ನು ನಡೆಸಲೇಬೇಕು. ಅದಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧವೇ ಇಲ್ಲ. ಅಷ್ಟಕ್ಕೂ ಅವರು ಬಿಜೆಪಿಯಲ್ಲಿಯೇ ಇಲ್ಲ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು