ಶನಿವಾರ, ಡಿಸೆಂಬರ್ 7, 2019
25 °C

ಮೊದಲ ಬಾರಿಗೆ ಮತ ಚಲಾಯಿಸಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಮತದಾನ ಮಾಡುವ ಸಲುವಾಗಿ ನಾಲ್ಕು ದಿನ ಮೊದಲೇ ಬಳ್ಳಾರಿಗೆ ಬಂದಿದ್ದ ಜಿ.ಕಿರೀಟಿ ರೆಡ್ಡಿ, ಇದೇ ಮೊದಲ ಭಾರಿಗೆ ತಮ್ಮ ಹಕ್ಕನ್ನು ಚಲಾಯಿಸಿದರು.

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ತಾಯಿ ಲಕ್ಷ್ಮಿ ಅರುಣಾ, ತಾತ ಪರಮೇಶ್ವರ ರೆಡ್ಡಿ, ಅಜ್ಜಿ ನಾಗ ಲಕ್ಷ್ಮಮ್ಮ ಹಾಗೂ ಸೋದರಿ ಬ್ರಹ್ಮಿಣಿ ಅವರೊಡಗೂಡಿ ಅವಂಬಾವಿಯ ಮತಗಟ್ಟೆ ಸಂಖ್ಯೆ 5 ರಲ್ಲಿ ಮತದಾನ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಜನರ ಸೇವೆ ಮಾಡುವ ಇಚ್ಛೆ ಇದೆ. ನನ್ನ ಮೊದಲ ಆದ್ಯತೆ ಚಿತ್ರರಂಗ. ಚಲನ ಚಿತ್ರದಲ್ಲಿ ನಟಿಸುವ ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಉತ್ಸುಕತೆ ಹೊಂದಿದ್ದೇನೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು