ಲೈಂಗಿಕ ಅಲ್ಪಸಂಖ್ಯಾತೆಗೆ ಉದ್ಯೋಗ ಕೊಟ್ಟ ಸಚಿವೆ ಜಯಮಾಲಾ

ಮಂಗಳವಾರ, ಮಾರ್ಚ್ 26, 2019
22 °C

ಲೈಂಗಿಕ ಅಲ್ಪಸಂಖ್ಯಾತೆಗೆ ಉದ್ಯೋಗ ಕೊಟ್ಟ ಸಚಿವೆ ಜಯಮಾಲಾ

Published:
Updated:
Prajavani

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರಾದ ಪರಿಚಯ ಗೌಡ ಅವರಿಗೆ ಉದ್ಯೋಗ ನೀಡಿದ್ದು, ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಯಮಾಲಾ ಅವರು ರಾಜ್ಯ ಸರ್ಕಾರಕ್ಕೆ ಈ ಹಿಂದೆ ವರದಿ ಸಲ್ಲಿಸಿದ್ದರು.

‘ಸಮಾಜದಲ್ಲಿ ಸಾಮಾನ್ಯವಾಗಿ ಕಡೆಗಣನೆಗೆ ತುತ್ತಾಗಿ ಪ್ರತಿನಿತ್ಯ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರ ಬದುಕಿಗೆ ನೆಲೆ ಕಲ್ಪಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನನ್ನ ಕಚೇರಿಯಿಂದಲೇ ಈ ಕೆಲಸ ಅಕ್ಷರಶಃ ಜಾರಿಗೆ ತರಲಾಗಿದೆ. ಇದೊಂದು ಉತ್ತಮ ಪ್ರಾರಂಭ’ ಎಂದು ಜಯಮಾಲಾ ತಿಳಿಸಿದ್ದಾರೆ.

‘ಸೂಕ್ತ ಅವಕಾಶ ಸಿಕ್ಕಿದರೆ ಅವರು ಸಹ ಎಲ್ಲರಂತೆಯೇ ಉತ್ತಮವಾಗಿ ಕೆಲಸ ಮಾಡಬಲ್ಲರು ಎಂಬ ವಿಶ್ವಾಸ ನನಗಿದೆ’ ಎಂದು ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !