ವಚನಗಳೇ ನಿಜವಾದ ಧರ್ಮಗ್ರಂಥಗಳು

ಮಂಗಳವಾರ, ಜೂನ್ 25, 2019
22 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ

ವಚನಗಳೇ ನಿಜವಾದ ಧರ್ಮಗ್ರಂಥಗಳು

Published:
Updated:
Prajavani

ಬೆಂಗಳೂರು: ‘ನಮ್ಮ ದೇಶವನ್ನು ಆಕ್ರಮಣಕಾರರಿಂದ ಬಿಡಿಸಿಕೊಂಡಿದ್ದೇವೆ. ಆದರೆ, ಜಾತಿ ವ್ಯವಸ್ಥೆಯ ಹಿಡಿತದಿಂದ ಮುಕ್ತ ಮಾಡಲು ಆಗಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ಹೇಳಿದರು.

ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ, ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನ ಹಾಗೂ ಬಸವ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಚನ ಸಾಹಿತ್ಯದ ಬಹುತ್ವದ ನೆಲೆಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಚಾತುವರ್ಣ ವ್ಯವಸ್ಥೆ ತರತಮವನ್ನು ಹುಟ್ಟು ಹಾಕಿತು. ಸಂಪನ್ಮೂಲಗಳ ಅಸಮಾನ ಹಂಚಿಕೆ ಮಾಡಿತು. ಮನುಷ್ಯರನ್ನು ಶ್ರೇಷ್ಠ–ಕನಿಷ್ಠವೆಂದು ವಿಭಜನೆ ಮಾಡಿತು. ಸಮಾನತೆಯ ತತ್ವವನ್ನು ಬುದ್ಧ, ಮಹಾವೀರ, ಗುರುನಾನಕ್‌, ಸಿದ್ಧರು, ನಾಥರು ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಆಶಯಗಳು ಇನ್ನೂ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಚನಗಳೇ ನಿಜವಾದ ಧರ್ಮಗ್ರಂಥಗಳು. ಅವು ಬಹುತ್ವದ ನೆಲೆಯನ್ನು ಪ್ರತಿನಿಧಿಸುತ್ತವೆ. ಶರಣ ಚಳವಳಿಯ ಉಪ ಉತ್ಪನ್ನವೇ ವಚನ ಸಾಹಿತ್ಯ. ಅದು ಸೈದ್ಧಾಂತಿಕ ಸಾಹಿತ್ಯವಲ್ಲ, ಕಾಯಕ ಚರಿತ ಸಾಹಿತ್ಯ’ ಎಂದರು.

‘ಇಂದಿನ ವಿದ್ಯಾರ್ಥಿಗಳಿಗೆ ತಿರುಚಿದ, ತಪ್ಪು ಕಲ್ಪನೆಗಳ ಚರಿತ್ರೆಯನ್ನು ಹೇಳಿಕೊಡಲಾಗುತ್ತಿದೆ. ಅವರಿಗೆ ಕಾಯಕ ಪರಿಭಾಷೆಯ ವಚನಗಳಿಂದ ವಿವೇಕ ತುಂಬಬೇಕಿದೆ’ ಎಂದರು.

ಬಸವ ವೇದಿಕೆಯ ಅಧ್ಯಕ್ಷ ಸಿ.ಸೋಮಶೇಖರ್‌,‘ಬಹುತ್ವದ ನೆಲೆಯಲ್ಲಿ ರೂಪಿತವಾದ ವಚನಗಳು ಹಲವಾರು ಜನರಿಗೆ ಪ್ರೇರಣೆ ಆಗಿವೆ. ಸಾಮಾಜಿತ ತತ್ವ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದೆ. ವಚನಗಳ ಗುಚ್ಛವು ನಮ್ಮ ನಾಡು ವಿಶ್ವಕ್ಕೆ ಕೊಟ್ಟ ಮೊದಲ ಸಂವಿಧಾನವಾಗಿದೆ’ ಎಂದರು.

*

ಮನುಶಾಸ್ತ್ರದಿಂದ ಮೇಲ್ವರ್ಗಗಳು ಆಳಿದವು. ಇಂದು ಸಹ ಆ ವೈದಿಕಶಾಸ್ತ್ರದವರೇ ನಮ್ಮನ್ನು ಆಳುತ್ತಿದ್ದಾರೆ. ಸಂವಿಧಾನ ಬದಲಾವಣೆಯ ಮಾತನಾಡುತ್ತಿದ್ದಾರೆ. 

– ಎಸ್‌.ಜಿ.ಸಿದ್ಧರಾಮಯ್ಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !