ಪರಿಷತ್‌ನ ಎರಡು ಸ್ಥಾನಗಳಿಗೆ ಜೆಡಿಎಸ್‌ ಬೇಡಿಕೆ

7
ಮೂರು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ: ಆಕ್ಷೇಪ ಸಲ್ಲಿಸಲು ಬಿಜೆಪಿ ನಿರ್ಧಾರ

ಪರಿಷತ್‌ನ ಎರಡು ಸ್ಥಾನಗಳಿಗೆ ಜೆಡಿಎಸ್‌ ಬೇಡಿಕೆ

Published:
Updated:

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಬೇಡಿಕೆ ಸಲ್ಲಿಸಲು ಜೆಡಿಎಸ್‌ ಮುಂದಾಗಿದೆ.

ಕಾಂಗ್ರೆಸ್‌ನ ಜಿ.ಪರಮೇಶ್ವರ, ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಮತ್ತು ವಿ.ಸೋಮಣ್ಣ ರಾಜೀನಾಮೆಯಿಂದ ಈ ಸ್ಥಾನಗಳು ತೆರವಾಗಿವೆ. ಈ ಮೂರು ಸ್ಥಾನಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಪ್ರತ್ಯೇಕವಾಗಿ ಚುನಾವಣೆ ನಡೆಸುವ ಆಯೋಗದ ನಿರ್ಧಾರದ ಬಗ್ಗೆ ಆಕ್ಷೇಪ ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ.

‘ಮೂರಲ್ಲಿ ಎರಡು ಸ್ಥಾನಗಳ ಸದಸ್ಯತ್ವ ಅವಧಿ 20 ತಿಂಗಳು ಮಾತ್ರ ಇದೆ. ಇನ್ನೊಂದು ಸ್ಥಾನದ ಸದಸ್ಯತ್ವದ ಅವಧಿ ಮೂರೂವರೆ ವರ್ಷವಿದೆ. ಅಲ್ಪ ಅವಧಿ ಸದಸ್ಯತ್ವದ ಎರಡು ಸ್ಥಾನಗಳನ್ನು ನಮಗೆ ಕಾಂಗ್ರೆಸ್‌ ನೀಡಲಿ. ಇನ್ನೊಂದು ಅವರು ಇಟ್ಟುಕೊಳ್ಳಲಿ ಎಂಬ ಬೇಡಿಕೆ ಸಲ್ಲಿಸಲಾಗುವುದು’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಅಂತಿಮವಾಗಿ ಸ್ಥಾನ ಹಂಚಿಕೆ ವಿಚಾರ ಅಂತಿಮವಾಗಿ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ ಆಗಬೇಕು. ಕಾಂಗ್ರೆಸ್‌ ಮತ್ತು ಜೆಡಿಎಸ್‌(ಪಕ್ಷೇತರರು ಸೇರಿ) 118 ಶಾಸಕರನ್ನು ಹೊಂದಿದೆ. ಬಿಜೆಪಿ 104 ಶಾಸಕರನ್ನು ಹೊಂದಿದೆ. ಹೀಗಾಗಿ ಮೂರೂ ಸ್ಥಾನಗಳಲ್ಲಿ ನಮ್ಮ ಗೆಲುವು ಖಚಿತ’  ಎಂದು ಅವರು ಹೇಳಿದರು.

ಚುನಾವಣಾ ಆಯೋಗಕ್ಕೆ ಆಕ್ಷೇಪ: ಮೂರು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಸುವ ತೀರ್ಮಾನದ ಬಗ್ಗೆ ಚುನಾವಣೆ ಆಯೋಗಕ್ಕೆ ಆಕ್ಷೇಪ ಸಲ್ಲಿಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !