ಮಂಗಳವಾರ, ಮೇ 18, 2021
23 °C

ನಮ್ಮ ಉಸಾಬರಿ ದೇವೇಗೌಡರ ಜೊತೆಗಷ್ಟೇ, ಇನ್ಯಾರೊಂದಿಗೂ ಇಲ್ಲ: ಹೊರಟ್ಟಿ ಮುನಿಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ರಾಜಕೀಯ ಬೇಸರ ಆಗಿದೆ. ನಮ್ಮ ಉಸಾಬರಿ ಏನಿದ್ದರೂ ದೇವೇಗೌಡರ ಜೊತೆಗೇ ಹೊರತು ಬೇರಾರ ಜೊತೆಯೂ ಇಲ್ಲ ಎನ್ನುವ ಮೂಲಕ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಅವರು ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ಬೆಳಗಾವಿ ವಿಭಾಗಮಟ್ಟದ ಜೆಡಿಎಸ್‌ ಕಾರ್ಯಕರ್ತರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜಕೀಯ ಬೇಸರ ಆಗಿದೆ. ಆದರೆ, ದೇವೇಗೌಡರ ಮುಖನೋಡಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಉಸಾಬರಿ ಏನಿದ್ದರೂ ದೇವೇಗೌಡರ ಜೊತೆಗೇ ಹೊರತು ಬೇರಾರ ಜೊತೆಯೂ ಇಲ್ಲ’ ಎಂದು ಹೇಳುವ ಮೂಲಕ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘1983ರಿಂದಲೂ ಕಾಂಗ್ರೆಸ್‌, ಬಿಜೆಪಿ ಸೇರುವಂತೆ ನನಗೆ ಆಹ್ವಾನ ಬರುತ್ತಲೇ ಇದೆ. ಆದರೆ, ಅಂದಿನಿಂದ ಇಂದಿನವರೆಗೂ ನನ್ನ ಪಕ್ಷ ನಿಷ್ಠೆ ಬದಲಾಗಿಲ್ಲ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು