ಪ್ರಭಾವಿಗಳ ಮೊರೆ ಹೋದ ಆಕಾಂಕ್ಷಿಗಳು

7

ಪ್ರಭಾವಿಗಳ ಮೊರೆ ಹೋದ ಆಕಾಂಕ್ಷಿಗಳು

Published:
Updated:

ಬೆಂಗಳೂರು: ಮಂಡ್ಯ ಲೋಕಸಭಾ ಉಪಚುನಾವಣೆ ಟಿಕೆಟ್‌ಗಾಗಿ ಲಕ್ಷ್ಮಿ ಅಶ್ವಿನ್‌ಗೌಡ ಮತ್ತು ಎಲ್‌.ಆರ್‌.ಶಿವರಾಮೇಗೌಡ ಭಾರಿ ಪೈಪೋಟಿ ನಡೆಸಿದ್ದು, ಪ್ರಭಾವಿಗಳ ಮೂಲಕ ಪ್ರಭಾವ ಬೀರುವ ಪ್ರಯತ್ನಕ್ಕೂ ಕೈ ಹಾಕಿದ್ದಾರೆ.

ಲಕ್ಷ್ಮಿ ಜೆಡಿಎಸ್‌ ಸೇರುವಾಗ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್‌ ಭರವಸೆ ಪಡೆದಿದ್ದರು. ಆದರೆ, ಈಗ ಶಿವರಾಮೇಗೌಡ ಟಿಕೆಟ್‌ಗೆ ಪೈಪೋಟಿ ಆರಂಭಿಸಿರುವುದರಿಂದ ಲಕ್ಷ್ಮಿ ಅವರು ಧಾರ್ಮಿಕ ಗುರುಗಳ ಮೂಲಕ ಪಕ್ಷದ ವರಿಷ್ಠರಿಗೆ ಹೇಳಿಸುವ ಪ್ರಯತ್ನ ನಡೆಸಿದ್ದಾರೆ. ಈ ಮಧ್ಯೆ ಶಿವರಾಮೇಗೌಡ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೂಲಕ ಟಿಕೆಟ್‌ ಗಿಟ್ಟಿಸುವ ಯತ್ನ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಚಲುವರಾಯಸ್ವಾಮಿ ಅವರನ್ನು ಸೋಲಿಸಲು ಸುರೇಶ್‌ಗೌಡ ಅವರ ಬೆಂಬಲಕ್ಕೆ ಶಿವರಾಮೇಗೌಡ ಶ್ರಮಿದ್ದರು.

ಶಿವರಾಮೇಗೌಡ ಈಗ ತಮ್ಮ ಶ್ರಮಕ್ಕೆ ಪ್ರತಿಫಲ ಕೇಳುತ್ತಿದ್ದಾರೆ. ಅವರು ಪಟ್ಟು ಬಿಗಿಗೊಳಿಸಿದರೆ ವರಿಷ್ಠರು ಇಕ್ಕಟ್ಟಿಗೆ ಸಿಲುಕುತ್ತಾರೆ. ಅಭ್ಯರ್ಥಿ ಆಯ್ಕೆ ಸಂಬಂಧ ದೇವೇಗೌಡ ಮತ್ತು ಕುಮಾರಸ್ವಾಮಿ ಗುರುವಾರ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !