‘ಚರ್ಚೆಯಾಗದ ಜನರ ವಿಷಯ: ರಜೆ ಕೋರಿದ ಶಾಸಕ

7

‘ಚರ್ಚೆಯಾಗದ ಜನರ ವಿಷಯ: ರಜೆ ಕೋರಿದ ಶಾಸಕ

Published:
Updated:

ಬೆಂಗಳೂರು: ‘ಜನರಿಗೆ ಸಂಬಂಧಿಸಿದ ವಿಚಾರಗಳು ಸದನದಲ್ಲಿ ಚರ್ಚೆಯಾಗುತ್ತಿಲ್ಲ ಎಂದು ಬೇಸರಗೊಂಡು ಗೈರು ಹಾಜರಾತಿಗೆ ಅನುಮತಿ ಕೋರಿ ವಿಧಾನಸಭಾ ಸಭಾಧ್ಯಕ್ಷರಿಗೆ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಪತ್ರ ಬರೆದಿದ್ದಾರೆ.

ವಿಧಾನಸಭೆ ಕಲಾಪ ಬುಧವಾರ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ಕೆ.ಆರ್‌. ರಮೇಶ್‍ ಕುಮಾರ್ ಅವರು ರಾಮಸ್ವಾಮಿ ಬರೆದ ಪತ್ರವನ್ನು ಸದನದ ಗಮನಕ್ಕೆ ತಂದರು.

‘ಅಧಿವೇಶನದಲ್ಲಿ ಜನರಿಗೆ ಸಂಬಂಧಿಸಿದ ವಿಷಯಗಳು ಪ್ರಸ್ತಾಪವಾಗುತ್ತಿಲ್ಲ. ಬೆಂಗಳೂರಿನ ಸುತ್ತಮುತ್ತ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಸಹಸ್ರಾರು ಕೋಟಿ ಮೌಲ್ಯದ ಆಸ್ತಿ ಕಬಳಿಸಿದ್ದಾರೆ. ಈ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ಸಿಕ್ಕಿಲ್ಲ. ನನಗೆ ರಜೆ ಕೊಡಿ. ಆ ಮೂಲಕ ಮತ ಕೊಟ್ಟು ಗೆಲ್ಲಿಸಿದ ಕ್ಷೇತ್ರದ ಜನರ ಋಣ ತೀರಿಸಲು ಸಮಯ ಕೊಡಿ ಎಂದು ಪತ್ರದಲ್ಲಿ ಬರೆದಿದ್ದಾರೆ’.

‘ಬೆಳಗಾವಿ ಅಧಿವೇಶನದಲ್ಲೂ ಈ ವಿಷಯ ಕುರಿತು ಚರ್ಚೆಗೆ ಸೂಚನೆ ಕೊಟ್ಟಿದ್ದರೂ ಅವಕಾಶ ಸಿಗಲಿಲ್ಲ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !