ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬಾಲೆಯರ 14 ಕಿ.ಮೀ ನಡಿಗೆ!

ಗೌಳಿ ಜನಾಂಗದ ಬಾಲಕಿಯರಿಗೆ ಸಿಗದ ಹಾಸ್ಟೆಲ್ ಸೌಲಭ್ಯ
Last Updated 25 ಜುಲೈ 2019, 19:56 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ ಜಗಲಪೇಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆರೆಗಾಳಿ ಮತ್ತು ಪಾಟಿಲವಾಡಾ ಗ್ರಾಮದ ನಾಲ್ವರು ವಿದ್ಯಾರ್ಥಿನಿಯರು ಹಾಸ್ಟೆಲ್ ಸೌಲಭ್ಯ ಸಿಗದೇ ಪರದಾಡುತ್ತಿದ್ದಾರೆ.

ಜಗಲಪೇಟ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಅವರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಪ್ರವೇಶಾತಿ ಸಿಗುತ್ತದೆ ಎಂಬ ವಿಶ್ವಾಸದಿಂದ ಜಗಲಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಗೆ ಪ್ರವೇಶ ಪಡೆದುಕೊಂಡರು. ಆದರೆ, ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್‌ ವ್ಯವಸ್ಥೆಯಾಗಿಲ್ಲ.

ರಮಿ, ದೋಂಡಿ, ಮನೀಷಾ ಹಾಗೂ ತಾಯಿ ಹೆಸರಿನ ಬುಡಕಟ್ಟು ಗೌಳಿ ಜನಾಂಗದನಾಲ್ವರು ವಿದ್ಯಾರ್ಥಿನಿಯರು ಪ್ರತಿದಿನ 14 ಕಿ.ಮೀಕಾಡಿನ ಮಧ್ಯೆ ಮನೆಗೆ ಹಾಗೂ ಶಾಲೆಗೆ ಸಂಚರಿಸುತ್ತಿದ್ದಾರೆ. ದಾರಿ ಮಧ್ಯೆ ಕಾಡುಪ್ರಾಣಿಗಳ ಭಯವೂ ಕಾಡುತ್ತದೆ. ವಾಹನ ಸೌಕರ್ಯವಿಲ್ಲದ ಕಾರಣಜಗಲಪೇಟ ಶಾಲೆಗೆ ನಡೆದುಕೊಂಡೇ ಬರುತ್ತಾರೆ.

ಈ ಭಾಗದಲ್ಲಿ ಎರಡು ತಿಂಗಳಲ್ಲಿ 10ಕ್ಕೂ ಹೆಚ್ಚು ಜಾನುವಾರು ಮೇಲೆ ಹುಲಿ ದಾಳಿ ಮಾಡಿದೆ. ಕಾಡುಕೋಣಗಳ ಸಂಚಾರವೂ ಹೆಚ್ಚಿದೆ.ಇಲ್ಲಿ ಸರಿಯಾದ ರಸ್ತೆಯೂ ಇಲ್ಲದೆ ಕೆಸರು, ಹಳ್ಳವನ್ನು ದಾಟಿ ವಿದ್ಯಾರ್ಥಿನಿಯರು ಬರುತ್ತಾರೆ. ಹಳ್ಳ ದಾಟಲು ತಂದೆ– ತಾಯಿ ಸಹಾಯ ಮಾಡುತ್ತಾರೆ.

‘ಪ್ರತಿ ದಿನ ಕಾಡಿನ ಮಧ್ಯೆ ನಡೆದುಕೊಂಡು ಬಂದು ಈ ಸಣ್ಣ ಮಕ್ಕಳು ಶಿಕ್ಷಣ ಪಡೆಯುವುದನ್ನು ನೋಡಿದರೆ ಬೇಸರ ಆಗುತ್ತದೆ. ಇವರಿಗೆ ವಸತಿ ನಿಲಯದಲ್ಲಿ ಪ್ರವೇಶಾತಿ ನೀಡದೆ ಇದ್ದರೆ ಹೋರಾಟ ಅನಿವಾರ್ಯ‘ ಎಂದುಕರ್ನಾಟಕ ಧನಗರ ಗೌಳಿ ಸಮಾಜದ ಉಪಾಧ್ಯಕ್ಷೆಸಾವಿತ್ರಿ ಪಾವಣೆ ಎಚ್ಚರಿಕೆ ನೀಡಿದ್ದಾರೆ.

ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿಸರೋಜಾ ಕುಳೆ, ‘ಹಾಸ್ಟೆಲ್‌ನಲ್ಲಿಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹೆಚ್ಚಿನ ಪ್ರವೇಶಾತಿಗೆಪ್ರಸ್ತಾವ ಸಲ್ಲಿಸಲಾಗಿದೆ. ಆದ್ಯತೆ ಮೇರೆಗೆ ಅವಕಾಶ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT