ನ್ಯಾಯಾಧೀಶರ ವಿರುದ್ಧ ಅನುಚಿತ ವರ್ತನೆ: ದೂರು ದಾಖಲು

7

ನ್ಯಾಯಾಧೀಶರ ವಿರುದ್ಧ ಅನುಚಿತ ವರ್ತನೆ: ದೂರು ದಾಖಲು

Published:
Updated:

ಮೈಸೂರು: ಚಾಮುಂಡಿಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಅನುಚಿತ ವರ್ತನೆ ಆರೋಪ ಹೊರೆಸಿ ಮಂಡ್ಯದ ನಾಲ್ಕನೇ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಅವರು ದೂರು ದಾಖಲಿಸಿದ್ದಾರೆ.

ನ್ಯಾಯಾಧೀಶರಾದ ರಾಜೇಶ್ವರಿ ಅವರು ತಮ್ಮ ಪುತ್ರನ ಜತೆ ಶನಿವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ತೆರಳಿದ್ದರು. ದಸರಾ ಗೋಲ್ಡ್‌ ಕಾರ್ಡ್ ಹೊಂದಿದ್ದರೂ ದೇವಸ್ಥಾನದ ಒಳಗೆ ಹೋಗದಂತೆ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ಹಾಗೂ ಭದ್ರತಾ ಸಿಬ್ಬಂದಿ ಮಹದೇವಸ್ವಾಮಿ ತಡೆದಿದ್ದಾರೆ. ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.

* ಚಾಮುಂಡಿಬೆಟ್ಟದಲ್ಲಿ ನ್ಯಾಯಾಧೀಶರ ವಿರುದ್ಧ ಅನುಚಿತವಾಗಿ ವರ್ತನೆ ಮಾಡಿರುವುದಾಗಿ ದೂರು ದಾಖಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು

– ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ಕಮಿಷನರ್‌

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !