ಹೈದರಾಬಾದ್‌ಗೆ ನ್ಯಾ.ಆರ್.ಎಸ್.ಚೌಹಾಣ್ ವರ್ಗ, ರಾಜ್ಯಕ್ಕೆ ನ್ಯಾ.ಪಿ.ಬಿ.ಭಜಂತ್ರಿ

7

ಹೈದರಾಬಾದ್‌ಗೆ ನ್ಯಾ.ಆರ್.ಎಸ್.ಚೌಹಾಣ್ ವರ್ಗ, ರಾಜ್ಯಕ್ಕೆ ನ್ಯಾ.ಪಿ.ಬಿ.ಭಜಂತ್ರಿ

Published:
Updated:

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ರಘ್ವೇಂದ್ರ ಸಿಂಗ್ ಚೌಹಾಣ್ ಅವರನ್ನು ಹೈದರಾಬಾದ್‌ನಲ್ಲಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲಾಗಿದೆ.

ಪಂಜಾಬ್-ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದವರೇ ಆದ ಪವನಕುಮಾರ್ ಭೀಮಪ್ಪ ಭಜಂತ್ರಿ ಅವರನ್ನು ಕರ್ನಾಟಕ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ‌.

ಇಬ್ಬರೂ ನ್ಯಾಯಮೂರ್ತಿಗಳಿಗೆ ಇದೇ 22ರ ಒಳಗೆ ವರ್ಗಾವಣೆಗೊಂಡ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲು ನಿರ್ದೇಶಿಸಲಾಗಿದೆ. ಎರಡೂ ವರ್ಗಾವಣೆ ಆದೇಶಗಳ ಬಗ್ಗೆ ಕೇಂದ್ರ ಕಾನೂನು ಸಚಿವಾಲಯ ಇದೇ 8ರಂದು ಅಧಿಸೂಚನೆ ಹೊರಡಿಸಿದೆ.

ರಾಜ್ಯ ಹೈಕೋರ್ಟ್ ಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 62. ಸದ್ಯ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ 33.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !