ಹಲವರಿಗೆ ಲಾಟರಿ ಗೆಲುವು!

7

ಹಲವರಿಗೆ ಲಾಟರಿ ಗೆಲುವು!

Published:
Updated:

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ಪುರಸಭೆಯಲ್ಲಿ ಬಿಜೆಪಿಯ ಸಿದ್ಧರಾಮ ಯಳಸಂಗಿ ಹಾಗೂ ಕಾಂಗ್ರೆಸ್‌ನ ಮಲ್ಲಣ್ಣ ಕೊಡಚಿ  ತಲಾ 153 ಮತಗಳನ್ನು ಪಡೆದಿ
ದರು. ಚೀಟಿ ಎತ್ತಿದಾಗ ಸಿದ್ಧರಾಮ ಯಳಸಂಗಿ ಗೆಲುವು ಸಾಧಿಸಿದರು.

ಮತ್ತೊಂದು ವಾರ್ಡ್‌ನಲ್ಲಿ ಕಾಂಗ್ರೆಸ್‌ನ ರೋಶನಬೀ ದಾವಲ್ ಸಾಬ್ ಹಾಗೂ ಜೆಡಿಎಸ್‌ನ ಶಾಹಿನ್ ಬೇಗಂ ಅಬ್ದುಲ್ ಖಯುಂ ಸಮನಾಗಿ 326 ಮತಗಳನ್ನು ಪಡೆದಿದರು. ಚೀಟಿ ಎತ್ತಿದಾಗ ಜೆಡಿಎಸ್ ಶಾಹಿನ್ ಬೇಗಂ ಗೆಲುವಿನ ನಗೆ ಬೀರಿದರು.

ವಾರ್ಡ್ 14ರ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಭಾಗಪ್ಪ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು.

(ಬೀದರ್‌ ವರದಿ): ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ (ಬಿ) ಪುರಸಭೆ ಚುನಾವಣೆಯಲ್ಲಿ ಇಬ್ಬರು ಒಂದು ಮತದ ಅಂತರದ ಗೆಲುವು ದಾಖಲಿಸಿದ್ದಾರೆ. ವಾರ್ಡ್ ಸಂಖ್ಯೆ 2 ರಲ್ಲಿ ಬಿಜೆಪಿಯ ಪ್ರಿಯಾಂಕಾ ಮುರಳಿ 258 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಂಗೀತಾ ಶಾಮಣ್ಣ ಅವರನ್ನು ಒಂದು ಮತದ ಅಂತರದಿಂದ ಸೋಲಿಸಿದ್ದಾರೆ.

ವಾರ್ಡ್ ಸಂಖ್ಯೆ 21ರಲ್ಲಿ ಕಾಂಗ್ರೆಸ್‌ನ ಹುರ್ಮತ್‌ ಬೇಗಂ ಅಜೀಜ್ ಪಟೇಲ್ 121 ಮತಗಳನ್ನು ಗಳಿಸಿ ಬಿಜೆಪಿಯ ವಿಜಯಲಕ್ಷ್ಮಿ ಅವರನ್ನು ಒಂದುಮತದಿಂದ ಪರಾಭವಗೊಳಿಸಿದ್ದಾರೆ.

(ಕೊಪ್ಪಳ ವರದಿ): ಸೋಲಿನ ಹತಾಶೆಯಿಂದ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿಕರು ಜೆಡಿಎಸ್ ಬೆಂಬಲಿತ ಕುಟುಂಬದ ವೃದ್ಧೆ ರೆಹಮತ್ ಬೀ ಅವರಿಗೆ ಚಾಕುವಿನಿಂದ ಇರಿದಿದ್ದಾರೆ.

(ಶಿವಮೊಗ್ಗ ವರದಿ): ಮಹಾನಗರ ಪಾಲಿಗೆ ಚುನಾವಣೆಯಲ್ಲಿ 15ನೇ ವಾರ್ಡ್‌ (ಹರಿಗೆ)ನ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್, ಜೆಡಿಎಸ್ ಅಭ್ಯರ್ಥಿ ಸತ್ಯ ನಾರಾಯಣ ರಾಜು ಅವರು ಸಮ ಮತಗಳನ್ನು (1708) ಪಡೆದ ಕಾರಣ, ಚುನಾವಣಾಧಿಕಾರಿ ಲಾಟರಿ ಮೂಲಕ ಜೆಡಿಎಸ್ ಅಭ್ಯರ್ಥಿ ಗೆಲುವು ಪ್ರಕಟಿಸಿದರು.

(ಹೊಸದುರ್ಗ ವರದಿ): ಇಲ್ಲಿನ ಪುರಸಭೆ ಚುನಾವಣೆಗೆ 22ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್‌.ರಾಮಚಂದ್ರ 250 ಮತ ಪಡೆಯುವ ಮೂಲಕ ಕೇವಲ ಒಂದು ಮತದ ಅಂತರದಲ್ಲಿ ವಿಜೇತರಾದರರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !