ಕಲ್ಬುರ್ಗಿ ಹತ್ಯೆ: ನಾಲ್ಕು ತಿಂಗಳ ಮೊದಲೇ ಬೈಕ್‌ ಕಳವು

ಗುರುವಾರ , ಜೂನ್ 20, 2019
31 °C

ಕಲ್ಬುರ್ಗಿ ಹತ್ಯೆ: ನಾಲ್ಕು ತಿಂಗಳ ಮೊದಲೇ ಬೈಕ್‌ ಕಳವು

Published:
Updated:

ಧಾರವಾಡ: ಹಿರಿಯ ವಿಚಾರವಾದಿ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಹಂತಕರು ಬಳಸಿದ್ದು ಕದ್ದ ಬೈಕ್. ಅದೂ, ಜಿಲ್ಲೆಯ ನವಲಗುಂದ ತಾಲ್ಲೂಕಿನ ದೊಡ್ಡ ಮೊರಬದ್ದು ಎಂಬ ಕೌತುಕದ ವಿಷಯ ತನಿಖೆಯಿಂದ ತಿಳಿದುಬಂದಿದೆ.

ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುವ ಕರೀಂಸಾಬ್‌ ಎಂಬುವವರಿಗೆ ಸೇರಿದ್ದ ಈ ಬೈಕ್, ಡಾ. ಕಲಬುರ್ಗಿ ಅವರ ಹತ್ಯೆಗೆ ನಾಲ್ಕು ತಿಂಗಳು ಮೊದಲು (2015ರ ಮೇ 3) ಹಂತಕರು ಕಳ್ಳತನ ಮಾಡುವ ಮೂಲಕ ಬಲವಾದ ಯೋಜನೆ ರೂಪಿಸಿದ್ದರು. ಕದ್ದ ಬೈಕ್ ಅನ್ನು ಆರೋಪಿ ಗಣೇಶ ಮಿಸ್ಕಿನ್‌ ತನ್ನ ಬಳಿ ಇರಿಸಿಕೊಂಡಿದ್ದ. ನಂತರ ಅದನ್ನು ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದ ಎಂಬ ಅಂಶ ತನಿಖೆಯಿಂದ ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ.

ಕಳ್ಳತನವಾಗಿ, ಹತ್ಯೆಗೆ ಬಳಕೆಯಾಗಿದ್ದ ಬಜಾಜ್ ಡಿಸ್ಕವರಿ 125ಸಿಸಿ ಬೈಕ್‌ ನಂತರ ಪತ್ತೆಯಾಗಿದ್ದು ಮಹಾರಾಷ್ಟ್ರದ ವಾಸುದೇವ ಸೂರ್ಯವಂಶಿ ಎಂಬ ಮೆಕ್ಯಾನಿಕ್ ಬಳಿ. ಇದರ ನೋಂದಣಿ ಸಂಖ್ಯೆ ಫಲಕ ಬದಲಿಸಲಾಗಿತ್ತು. ನಂತರ ತನಿಖೆಯಿಂದ ಈ ಬೈಕ್‌ನ ಅಸಲಿ ನೋಂದಣಿ ಸಂಖ್ಯೆ ಮತ್ತು ಮಾಲೀಕರನ್ನು ಪೊಲೀಸರು ಪತ್ತೆ ಮಾಡಿದ್ದರು.

ಆದರೆ ಕಳುವಾಗುವ ಮೊದಲು ಬೈಕ್ ಅನ್ನು ಕರೀಂಸಾಬ್‌ ಅವರು ತಮ್ಮ ಭಾವ ಬುಡ್ಡೇಸಾಬ್ ಅಲ್ಲಿಪಿನ್ನಿ ಅವರಿಗೆ ನೀಡಿದ್ದರು. ಬುಡ್ಡೇಸಾಬ್‌ ಅದನ್ನು ಸಂಬಂಧಿಕರ ಮದುವೆಗೆಂದು ಹುಬ್ಬಳ್ಳಿ ತಾಲ್ಲೂಕಿನ ಮಾವನೂರಿಗೆ ತೆಗೆದುಕೊಂಡು ಹೋಗಿದ್ದರು. ಆಗ ಅಲ್ಲೇ ಒಂದು ತೋಟ ನೋಡಲು ಹೋಗಿದ್ದಾಗ ಬೈಕ್ ನಾಪತ್ತೆಯಾಗಿತ್ತು. ಆದರೆ ಈ ಕುರಿತು ದೂರು ದಾಖಲಾಗಿದ್ದು 2018ರ ಮೇ 3ರಂದು.

ಈ ಕುರಿತು ಬುಡ್ಡೇಸಾಬ್‌ ಪ್ರತಿಕ್ರಿಯಿಸಿ, ‘ಬೈಕ್ ಕಳೆದುಹೋದ ಒಂದೂವರೆ ಗಂಟೆಯಲ್ಲೇ ಠಾಣೆಗೆ ಹೋಗಿ ದೂರು ನೀಡಿದ್ದೆವು. ಎಫ್‌ಐಆರ್‌ ಆಗ ಮಾಡಿರಲಿಲ್ಲ. ವಿಚಾರಣೆ ನಡೆಸಿ ತಿಳಿಸಲಾಗುವುದು ಎಂದಷ್ಟೇ ಪೊಲೀಸರು ಹೇಳಿದರು. ಈ ನಡುವೆ ನಮ್ಮ ಭಾವ ತೀರಿಕೊಂಡರು. ಹೀಗಾಗಿ ನಾವೂ ಬೈಕ್ ವಿಷಯವನ್ನು ಅಲ್ಲಿಗೇ ಕೈಬಿಟ್ಟೆವು. ಆದರೆ ಮೂರು ವರ್ಷ ನಂತರ ಬಂದ ಬೆಂಗಳೂರಿನ ಪೊಲೀಸರು, ಬೈಕ್ ಸಿಕ್ಕಿದೆ ಎಂದು ನಮ್ಮನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ಮತ್ತು ವಿಚಾರಣೆ ನಡೆಸಿದರು. ಕಳುವಾದ ದಿನ ಮದುವೆ ಇತ್ತೇ ಎಂದು ಲಗ್ನಪತ್ರಿಕೆ ಪಡೆದು ಪರಿಶೀಲಿಸಿದರು’ ಎಂದು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !