ಆಳಂದದಲ್ಲಿ ಮಳೆ: ಗೋಡೆ ಕುಸಿದು ತಾಯಿ, ಇಬ್ಬರು ಮಕ್ಕಳು ಸಾವು

7

ಆಳಂದದಲ್ಲಿ ಮಳೆ: ಗೋಡೆ ಕುಸಿದು ತಾಯಿ, ಇಬ್ಬರು ಮಕ್ಕಳು ಸಾವು

Published:
Updated:

ಕಲಬುರ್ಗಿ: ಆಳಂದ ತಾಲ್ಲೂಕು ಹಿತ್ತಲ ಶಿರೂರ ಗ್ರಾಮದಲ್ಲಿ ಬುಧವಾರ ತಡರಾತ್ರಿ ಗೋಡೆ ಕುಸಿದು ಬಿದ್ದು ತಾಯಿ, ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ.

'ಲಕ್ಷ್ಮಿಬಾಯಿ (30), ಪುತ್ರಿಯರಾದ ಅಂಬಿಕಾ (10), ಶಿವಮ್ಮ (8) ಮೃತಪಟ್ಟವರು. ಲಕ್ಷ್ಮಿಬಾಯಿ ಪತಿ ಪ್ರಭು (36) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ರಾತ್ರಿಯಿಡೀ ಮಳೆ ಸುರಿದ ಪರಿಣಾಮ 2 ಗಂಟೆ ಸುಮಾರಿಗೆ ಗೋಡೆ ಕುಸಿದಿದೆ‌' ಎಂದು ಪೊಲೀಸರು ತಿಳಿಸಿದ್ದಾರೆ.
ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
***
ಇದನ್ನೂ ಓದಿರಿ
ಕೋಣಂದೂರಿನಲ್ಲಿ ಗೋಡೆ ಕುಸಿದು ಮಗು ಸಾವು

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !