ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಜಾಗೃತಿಗೆ ಟ್ವಿಟರ್‌ ಇಂಡಿಯಾ ಯೋಜನೆ

Last Updated 20 ಮಾರ್ಚ್ 2018, 19:25 IST
ಅಕ್ಷರ ಗಾತ್ರ

ಬೆಂಗಳೂರು: ಟ್ವಿಟರ್‌ ಇಂಡಿಯಾ ತನ್ನ 12ನೇ ವಾರ್ಷಿಕೋತ್ಸವ ‍ಪ್ರಯುಕ್ತ ಬ್ಲಡ್‌ ಡೋನರ್ಸ್‌ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ರಕ್ತದಾನದ ಜಾಗೃತಿ ಮೂಡಿಸಲು ಸಾಮಾಜಿಕ ಯೋಜನೆ (#BloodMatters) ಆರಂಭಿಸಿದೆ.

ರಕ್ತದಾನಿಗಳು ಮತ್ತು ರಕ್ತದ ಅಗತ್ಯವಿರುವವರ ನಡುವೆ ಸಂಪರ್ಕ ಬೆಸೆಯುವ ಉದ್ದೇಶದಿಂದ ನಗರದಲ್ಲಿ ಮಂಗಳವಾರ ಸಹಾಯವಾಣಿ ಅನಾವರಣಗೊಳಿಸಲಾಯಿತು. ಹ್ಯಾಷ್‍ಟ್ಯಾಗ್‌ನೊಂದಿಗೆ ಸ್ಥಳದ ವಿವರ, ರಕ್ತದ ಗುಂಪು, ಮೊಬೈಲ್ ಸಂಪರ್ಕ ಮತ್ತು @BloodDonorsINಗೆ ಟ್ವೀಟ್ ಮಾಡುವ ಮೂಲಕ ಜನರು ರಕ್ತದ ಮಾದರಿಗೆ ಕೋರಿಕೆ ಸಲ್ಲಿಸಬಹುದು.

ಟ್ವಿಟರ್‌ ಇಂಡಿಯಾದ ಸಾರ್ವಜನಿಕ ನೀತಿಯ ಮುಖ್ಯಸ್ಥ ಮಹಿಮಾ ಕೌಲ್, ‘ಟ್ವಿಟರ್ ಆರಂಭವಾದಾಗಿನಿಂದಲೂ ಸಮಾಜಕ್ಕೆ  ಕೊಡುಗೆ ನೀಡುವುದಕ್ಕೆ ಆದ್ಯತೆ ನೀಡುತ್ತಿದೆ. ರಕ್ತದಾನದ ಅಗತ್ಯದ ಕುರಿತು ಜಾಗೃತಿ ಮೂಡಿಸಲು ಹಾಗೂ ನಾಗರಿಕರಿಗೆ ರಕ್ತದ ಲಭ್ಯತೆಯ ಬಗೆಗಿನ ಮಾಹಿತಿ ಒದಗಿಸಲು ಪ್ರಯತ್ನಿಸಲಿದ್ದೇವೆ. ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಇರುವ ಅಂತರ ಸರಿ
ಪಡಿಸುವುದು ನಮ್ಮ ಗುರಿ’ ಎಂದರು.

ಬ್ಲಡ್ ಡೋನರ್ಸ್ ಇಂಡಿಯಾ ಸಂಸ್ಥಾಪಕ ಬಾಲು ನಾಯರ್ ಮಾತನಾಡಿ, ‘10 ವರ್ಷಗಳ ಕಾರ್ಯಾಚರಣೆಯಲ್ಲಿ, 10 ಲಕ್ಷಕ್ಕಿಂತಲೂ ಅಧಿಕ ಅನುಯಾಯಿಗಳನ್ನು ಟ್ವಿಟರ್‌ ಗಳಿಸಿದೆ. 2017ರಲ್ಲಿ ರಕ್ತದಾನ ಕೋರಿಕೆಗೆ 11,000 ಪ್ರತಿಕ್ರಿಯೆಗಳು ಬಂದಿವೆ. ದೇಶದ ನಾನಾ ಭಾಗಗಳಿಂದ ಈ ಕುರಿತು ಟ್ವೀಟ್ ಸ್ವೀಕರಿಸಲಾಗಿದ್ದು, ಹೈದರಾಬಾದ್, ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರು ಕ್ರಮವಾಗಿ ಮೊದಲ 5 ಸ್ಥಾನದಲ್ಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT