ಕಲ್ಲಡ್ಕ ಭಟ್ಟರ ಕಾರು ಚಾಲಕ ಸೆರೆ

7

ಕಲ್ಲಡ್ಕ ಭಟ್ಟರ ಕಾರು ಚಾಲಕ ಸೆರೆ

Published:
Updated:

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರ ಕಾರು ಚಾಲಕನನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುದ್ರೆಬೆಟ್ಟು ನಿವಾಸಿಯಾದ ಕಾರು ಚಾಲಕ ಯತಿರಾಜ್‌ ಬಂಧಿತ.

ಇಲ್ಲಿನ ಕುದ್ರೆಬೆಟ್ಟು ಎಂಬಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆಸುತ್ತಿರುವ ನೂತನ ರಸ್ತೆಗೆ ಸ್ಥಳೀಯ ನಿವಾಸಿ ಕಾಂತಪ್ಪ ಪೂಜಾರಿ ಅಡ್ಡಿ ಪಡಿಸುತ್ತಿದ್ದು, ಇದುವೇ ವೈಷಮ್ಯಕ್ಕೆ ಕಾರಣ ಎನ್ನಲಾಗಿದೆ.

ಇದೇ 3ರಂದು ಕಾಂತಪ್ಪ ಪೂಜಾರಿ ಮನೆಯ ಅಂಗಳದಲ್ಲಿ ಮನೆಯ ಸಾಕು ನಾಯಿ ಹೋಗಿರುವುದನ್ನು ಕರೆ ತರಲು ಹೋಗಿದ್ದ ಯತಿರಾಜ್ ಅವರ ತಾಯಿ ಹೇಮಾವತಿಗೆ ಅವಾಚ್ಯವಾಗಿ ಬೈದಿದ್ದಾರೆ. ಇದನ್ನು ಪ್ರಶ್ನಿಸಲು ಯತಿರಾಜ್ ತೆರಳಿದ ಬಳಿಕ ಕಾಂತಪ್ಪ ಪೂಜಾರಿ ಮತ್ತು ಅವರ ಪುತ್ರಿ ಚಂದ್ರಪ್ರಭಾ ಅವರಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಕಾಂತಪ್ಪ ಪೂಜಾರಿ ಅವಾಚ್ಯವಾಗಿ ಬೈದು ಜಾತಿ ನಿಂದನೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಯತಿರಾಜ್ ತಾಯಿ ಹೇಮಾವತಿ ಪ್ರತಿ ದೂರು ಸಲ್ಲಿಸಿದ್ದಾರೆ ಎಂದು ನಗರ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !