ಕಲಬುರ್ಗಿ: ಅನುಮಾನಾಸ್ಪದ ರೀತಿಯಲ್ಲಿ ಟ್ರೈನಿ ಪಿಎಸ್ಐ ಬಸವರಾಜ ಶವಪತ್ತೆ

7

ಕಲಬುರ್ಗಿ: ಅನುಮಾನಾಸ್ಪದ ರೀತಿಯಲ್ಲಿ ಟ್ರೈನಿ ಪಿಎಸ್ಐ ಬಸವರಾಜ ಶವಪತ್ತೆ

Published:
Updated:

ಕಲಬುರ್ಗಿ: ನಗರದ ರಾಮ ಮಂದಿರ ವೃತ್ತದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಕಾಂಪ್ಲೆಕ್ಸ್ ಎದುರು ಅನುಮಾನಾಸ್ಪದ ರೀತಿಯಲ್ಲಿ ತರಬೇತಿ ನಿರತ(ಟ್ರೈನಿ) ಪಿಎಸ್ಐ ಮೃತದೇಹ ಪತ್ತೆಯಾಗಿದೆ.

ಸೇಡಂ ತಾಲ್ಲೂಕು ಬೆನಕನಹಳ್ಳಿಯ ಬಸವರಾಜ ಶಂಕರಪ್ಪ ಮಂಚೆನ್ನವರ (27) ಮೃತಪಟ್ಟವರು.

ನಗರ ಹೊರವಲಯದ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಇವರು ತರಬೇತಿ ಪಡೆಯುತ್ತಿದ್ದರು. ಆರೋಗ್ಯ ಸರಿ ಇಲ್ಲ ಎಂದು ಹೇಳಿ ಶನಿವಾರ ಅನುಮತಿ ಪಡೆದುಕೊಂಡು ಹೊರಬಂದಿದ್ದರು. ಭಾನುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಂಪ್ಲೆಕ್ಸ್ ಎದುರು ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ ಬಸವರಾಜ ಕೊನೆಯುಸಿರೆಳೆದಿದ್ದಾರೆ. ಇದಾದ ಬಳಿಕವಷ್ಟೇ ಅವರು ತರಬೇತಿ ಪಡೆಯುತ್ತಿದ್ದ ಪಿಎಸ್ಐ ಎಂದು ಗೊತ್ತಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸವಿತಾ ಹೂಗಾರ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 7

  Sad
 • 0

  Frustrated
 • 4

  Angry

Comments:

0 comments

Write the first review for this !